ಜಲೋರ್ : ರಾಜಸ್ಥಾನದ ಜಲೋರ್ ನಲ್ಲಿ ಇಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಇಂದು ಮುಂಜಾನೆ 2.26 ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಾಜಸ್ಥಾನದ ಜೋಧಪುರದ 150 ಕಿ.ಮೀ ಎಸ್ ಎಸ್ ಡಬ್ಲ್ಯೂ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಟ್ವೀಟ್ ಮಾಡಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಕಳೆದ ಗುರುವಾರವೂ ರಾಜಸ್ಥಾನದ ಜೋಧಪುರದಲ್ಲಿ ಮುಂಜಾನೆ 3.30ರ ಸುಮಾರಿಗೆ ಭೂಕಂಪನ ಸಂಭವಿಸಿತ್ತು.
PublicNext
20/11/2021 02:08 pm