ಕೊಪ್ಪಳ: ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿದೆ.ಸತತ ಮಳೆಗೆ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಜಲಾಶಯದಲ್ಲಿಸಂಗ್ರಹವಾದ ಅಪಾರ ನೀರನ್ನ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕೇನೆ ನದಿ ಪಾತ್ರದ ಗ್ರಾಮದ ಜನರು ಎಚ್ಚರಕೆ ವಹಿಸುವಂತೆ ಮೈಕ್ ಮತ್ತು ತಮಟೆ ಮೂಲಕ ಈಗ ಸಂದೇಶ ರವಾನಿಸಲಾಗುತ್ತಿದೆ.
ಕೊಪ್ಪಳದ ಗಂಗಾವತಿ ಭಾಗದ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ತಾಲೂಕು ಪಂಚಾಯತ್ ಇಒ ಡಾ.ಡಿ.ಮೋಹನ್ ಹಾಗೂ ತಹಶೀಲ್ದಾರ ಆಯಾ ಗ್ರಾಮಕ್ಕೆ ತೆರೆಳಿ ಜನತೆಗೆ ಸೂಚಿಸಿದ್ದಾರೆ.ಸಿಬ್ಬಂದಿಗಳು ಕೂಡ ಮೈಕ್ ಮತ್ತು ತಮಟೆ ಮೂಲಕ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ.
PublicNext
19/11/2021 06:36 pm