ಗದಗ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಸದ್ಯ ನೋಡುಗರ ಮನಸೂರೆಗೊಳ್ಳುವಂತಿದೆ. ಕೆರೆ ಹಾಗೂ ಕೆರೆಯ ಸುತ್ತಲಿನ ಆವರಣದಲ್ಲಿ ಸ್ವದೇಶಿ-ವಿದೇಶಿ ಹಕ್ಕಿಗಳ ಕಲರವ ಹೆಚ್ಚಾಗಿವೆ. ವಿಶೇಷವೆಂದರೆ ಲಾಂಗ್ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಪೇಂಟೆಡ್ ಸ್ಪಾರ್ಕ್, ಬ್ಲ್ಯಾಕ್ ಬಿಸ್, ವ್ಹೈಟ್ ಬಿಸ್, ಸ್ಕ್ಯಾಪ್ ಡಕ್, ಸ್ಪಾಟ್ ಬಿಲ್ ಸೇರಿದಂತೆ ಅಪರೂಪದ ಪಕ್ಷಿಗಳು ವಲಸೆ ಬಂದು ಮಾಗಡಿ ಕೆರೆಯಲ್ಲಿ ಸಾಮ್ರಾಜ್ಯ ಸೃಷ್ಟಿಸಿವೆ.
ರಷ್ಯಾ, ಮಲೇಶಿಯಾ, ಆಸ್ಟ್ರೇಲಿಯಾ, ಸೈಬೀರಿಯಾ, ಟಿಬೆಟ್ ಅಷ್ಟೇ ಅಲ್ಲ ನಮ್ಮ ಕಾಶ್ಮೀರದ ಲಡಾಕ್ ನಿಂದಲೂ ಇಲ್ಲಿ ಹಕ್ಕಿ ಚಳಿಗಾಲಕ್ಕೆ ವಲಸೆ ಬರುತ್ತವೆ. ಸುಮಾರು 134 ಎಕರೆ ಪ್ರದೇಶದಲ್ಲಿ ಇರುವ ಕೆರೆಯಲ್ಲಿ ಎತ್ತ ನೋಡಿದರತ್ತ ಹೃದಯ ಗೆಲ್ಲುವ ಹಕ್ಕಿಗಳೇ ಕಾಣಸಿಗುತ್ತವೆ. ದೇಶ-ವಿದೇಶಗಳ ಹಕ್ಕಿಗಳನ್ನು ನೋಡಲು ಪಕ್ಷಿಪ್ರೇಮಿಗಳು ಮಾಗಡಿ ಕೆರೆಯತ್ತ ಲಗ್ಗೆ ಇಡುತ್ತಿದ್ದಾರೆ.
PublicNext
14/11/2021 04:58 pm