ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಮೈಸೂರಿನಲ್ಲಿ‌ ಧಾರಾಕಾರ ಮಳೆ; ಕೆರೆಯಂತಾದ ರಸ್ತೆ

ಮೈಸೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯು ಭಾರಿ ಅವಾಂತರ ಸೃಷ್ಟಿಸಿದೆ.ಬೋಗಾದಿ ಬಳಿಯಿರುವ ಮರಿಯಪ್ಪನ

ಕೆರೆಯ ಕೋಡಿ ಒಡೆದು ಮುಖ್ಯ ರಸ್ತೆಗೆ ನೀರಿ ಹರಿದಿದೆ.

ರಸ್ತೆಗಳಲೆಲ್ಲಾ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತು ಕೆರೆಯಂತಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

ವಿಜಯನಗರದ ಮೂಲಕ ಸಂಪರ್ಕ ಹೊಂದಿರೋ ಕೆರೆ ಇದಾಗಿದ್ದು. ರಸ್ತೆಯಲ್ಲಿ ನೀರು ನಿಂತ ಕಾರಣ ಅಕ್ಕಪಕ್ಕದಲ್ಲಿದ್ದ ಎರಡು ಶಾಲೆಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಇನ್ನೂ ರಾಜಕಾಲುವೆ ಕೂಡ ಮಳೆ ನೀರಿನಿಂದ ತುಂಬಿ ಹರಿಯುತ್ತಿದೆ.

Edited By : Manjunath H D
PublicNext

PublicNext

26/10/2021 07:09 pm

Cinque Terre

34.49 K

Cinque Terre

0