ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಇಡೀ ಮೈಸೂರು ತತ್ತರಿಸಿ ಹೋಗಿದೆ. ಹಬ್ಬದ ಸಡಗರದಲ್ಲಿದ್ದ ಮಂದಿಗೆ ವರುಣ ಆರ್ಭಟ ಕಿರಿಕಿರಿ ತಂದಿದೆ.ಎಲ್ಲಿ ನೋಡಿದ್ರೂ ಅಲ್ಲಿ ನದಿಯಂತೆ ಹರಿಯುವ ನೀರು ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ.
ಮುಂದಿನ ಎರಡ್ಮೂರು ದಿನ ಮಳೆಯ ಅಬ್ಬರ ಹೆಚ್ಚು ಇರುತ್ತದೆ ಅಂತಲೇ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. 16 ಮತ್ತು 17 ರಂದು ಸಿಕ್ಕಾಪಟ್ಟೆ ಮಳೆ ಇರುತ್ತದೆ ಅಂತಲೂ ಹೇಳಿದೆ. ಆದರೆ 15 ರಂದು ನಿನ್ನೇನೆ ಅದರ ಪ್ರಭಾವ ಶುರು ಆಗಿದೆ. ಇಡೀ ಮೈಸೂರು ಇಡೀ ರಾತ್ರಿ ಮಳೆಯ ಅಬ್ಬರಕ್ಕೆ ತಲ್ಲಣಗೊಂಡಿದೆ. ಆ ದೃಶ್ಯ ನಿಜಕ್ಕೂ ನದಿಯ ನೀರು ಹರಿದಂತೆ ಭಾಸವಾಗಿದೆ.
----
PublicNext
16/10/2021 03:14 pm