ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಡಿಯೋ: ಸ್ಪೇನ್ ದ್ವೀಪದಲ್ಲಿ ಜ್ವಾಲಾಮುಖಿ: ಮನೆಗಳು ಸರ್ವನಾಶ

ಇದ್ದಕ್ಕಿದ್ದಂತೆ ಇಡೀ ಊರಿಗೆ ಜ್ವಾಲಾಮುಖಿಯ ಕೆನ್ನಾಲಿಗೆ ಆವರಿಸಿಕೊಂಡಿದೆ. ಪರಿಣಾಮ ಊರಿಗೆ ಊರೇ ಹೊತ್ತಿ ಉರಿದಿದೆ.

ಸ್ಪೇನ್​ನ ಕ್ಯಾನರಿ ದ್ವೀಪ ಸಮೂಹದಲ್ಲಿರುವ ಲಾ ಪಾಲ್ಮಾ ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಈ ದುರಂತದಲ್ಲಿ ಅನೇಕ ಮನೆಗಳು ಸರ್ವನಾಶಗೊಂಡಿದ್ದು, ಪ್ರಾಣಹಾನಿಗಳನ್ನು ತಪ್ಪಿಸಲು 5000 ಜನರನ್ನು ಸ್ಥಳಾಂತರ ಮಾಡಿಸಲಾಗಿದೆ. ಮನೆಯೊಂದರ ಈಜುಗೊಳದಲ್ಲಿ ಲಾವಾರಸ ಸೋರಿದೆ. ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ.

Edited By : Nagesh Gaonkar
PublicNext

PublicNext

21/09/2021 08:09 pm

Cinque Terre

115.64 K

Cinque Terre

1