ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹವ್ಯಾಸಿ ಪ್ರವಾಸಿಗರ ಸಮಯಪ್ರಜ್ಞೆ ತಪ್ಪಿತು ದೂದ್ ಸಾಗರ ಬಳಿ ರೈಲು ಅಪಘಾತ.!

ಬೆಳಗಾವಿ: ಕಳೆದ ಒಂದು ವಾರಗಳಿಂದ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಬಿಳುತ್ತಿರುವ ಹಿನ್ನಲೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೃಹತ್ತ ಮರಗಳು ಬಿಳುವುದು ಸರ್ವೇಸಮಾನ್ಯ. ಇದೇ ರೀತಿ ಬೆಳಗಾವಿ ಮತ್ತು ಗೋವಾ ಮಾರ್ಗವಾಗಿ ಹೋಗುವ ರೈಲ್ವೆ ಮಾರ್ಗವಾದ ದೂದ್ ಸಾಗರ ಸಮೀಪದಲ್ಲಿಯೇ ಬೃಹತ್ ಮರವೊಂದು ರೈಲು ಟ್ರ್ಯಾಕ್ ಮೇಲೆ ಉರುಳಿ ಬಿದ್ದಿದೆ. ಇದನ್ನು ಗಮನಿಸಿದ ಬೆಂಗಳೂರು ಹವ್ಯಾಸಿ ಪ್ರವಾಸಿ ಯುವಕರ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸುವ ಮೂಲಕ ಮುಂದಾಗುವ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಬೆಳಗಾವಿಯ ಪಶ್ಚಿಮ ಘಟ್ಟ ಭಾಗದಲ್ಲಿರುವ ದೂದ್ ಸಾಗರ್ ಜಲಪಾತದ ನೋಡಲು ತೆರಳಿದ ಯುವಕರ ತಂಡವೊಂದರ ಸಮಯ ಪ್ರಜ್ಞೆಯಿಂದ ದೊಡ್ಡ ಪ್ರಮಾಣದ ರೈಲು ಅಪಘಾತದ ತಪ್ಪಿದ ಘಟನೆ ನಡೆದಿದೆ. ಮಧ್ಯಾಹ್ನ 2.30ರ ಸುಮಾರಿಗೆ ರೈಲ್ವೆ ಹಳಿಯ ಮೇಲೆ ಬೃಹತ್ ಮರ ಬೀಳುತ್ತಿರುವುದನ್ನು ಗಮನಿಸಿ ಅದನ್ನ ತೆಗೆಯುವ ಪ್ರಯತ್ನ ಮಾಡುತ್ತಿದ್ದರು.

ಆದರೆ ಅದೇ ಸಮಯದಲ್ಲಿ ರೈಲೊಂದು ಬರುತ್ತಿರುವ ಹಾರ್ನ್ದ ಶಬ್ದವನ್ನು ಯುವಕರ ಕೇಳಿ ಆ ಗಿಡವನ್ನು ತೆಗೆಯುವ ಪ್ರಯತ್ನವನ್ನು ಜೋರಾಗಿ ಮಾಡಿದ್ದಾರೆ ಆದರೆ ಅಷ್ಟರಲ್ಲಿ ರೇಲು ಹತ್ತಿರಕ್ಕೆ ಬರುತ್ತಿರುವುದನ್ನು ಕಂಡು ಇದ್ನ ಗಮನಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಗೌರವ್ ಮತ್ತು ಆತನ ಸಹೋದ್ಯೋಗಿಗಳು ಮೈಮೇಲೆ ಹಾಕಿಕೊಂಡಿರುವ ಕೆಂಪು ಟೀ‌ಶರ್ಟ್, ಜಾಕೆಟ್ ಮತ್ತು ಟವೆಲ್ ಗಳನ್ನು ಬೀಸುತ್ತಾ ರೈಲ್ ಬರುವ ಮಾರ್ಗವಾಗಿ ಹೋಗಿದ್ದಾರೆ ಮತ್ತು ರೈಲ್ ನ್ನು ನಿಲ್ಲಿಸುವಂತೆ ರೈಲು ಚಾಲನಿಗೆ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಮುಂದಾಗಬಹುದಿದ್ದ ಅನಾಹುತ ತಪ್ಪಿದಂತಾಗಿದೆ.

Edited By : Shivu K
PublicNext

PublicNext

09/09/2021 10:03 pm

Cinque Terre

71.13 K

Cinque Terre

19