ದಾವಣಗೆರೆ: ಜಿಲ್ಲೆಯಲ್ಲಿ ಆಪರೇಷನ್ ಚಿರತೆ ಶುರುವಾಗಿದ್ದು, ಹರಿಹರ ತಾಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಚಿಕ್ಕಬಿದರೆಯಲ್ಲಿ ಜುಲೈ ತಿಂಗಳ ಮೊದಲ ವಾರ ಚಿರತೆ ಕಾಣಿಸಿಕೊಂಡಿತ್ತು. ಕುರಿಗಾಹಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ನಾಲ್ಕಾರು ಕುರಿ ಬಲಿ ಪಡೆದಿತ್ತು. ಅಡಿಕೆ ತೋಟದಲ್ಲಿ ಬೀಡು ಬಿಟ್ಟಿದ ಕುರಿಗಾಹಿಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸಿಕ್ಕಿ ಬಿದ್ದಿದೆ.
ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಹೋಗಲು ಗ್ರಾಮಸ್ಥರು ಹೆದರುತ್ತಿದ್ದರು. ಘಟನಾ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಪಿಎಸ್‍ಐ ಡಿ. ರವಿಕುಮಾರ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಚಿರತೆ ಬಂಧನಕ್ಕೆ ಪೊಲೀಸ್, ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಸತತ ಎರಡು ತಿಂಗಳ ಪ್ರಯತ್ನದ ನಂತರ ಬೋನಿಗೆ ಚಿರತೆ ಬಿದ್ದಿದೆ.
PublicNext
08/09/2021 07:02 pm