ಚಿತ್ರದುರ್ಗ: ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಾಲಾಗಿ ಬಣ್ಣ ಬಣ್ಣದ ಕಾರುಗಳು, ಒಂದರ ಹಿಂದೆ ಒಂದು ಬರುತ್ತಿದ್ದರೆ ನೋಡಿದರೆ ಅದು ಕಾರು ರೇಸ್ ನ ಸ್ಪರ್ಧೆಯಿತ್ತೆನೋ ಎಂಬ ಭಾವನೆ ಬರೋದು ಸಹಜ, ಆದರೆ ಇದು ರೇಸ್ ಸ್ಪರ್ಧೆ ಅಲ್ಲ, ಬದಲಿಗೆ ಸ್ನೇಹಿತರೆಲ್ಲರೂ ಕೂಡ ಚಿತ್ರದುರ್ಗ ಕಡೆಯಿಂದ ಬೆಂಗಳೂರಿಗೆ ಹೋಗುವಾಗ ಲ್ಯಾಂಬರ್ಗಿ ಕಾರುಗಳ ದೃಶ್ಯ ಮನ ಮೋಹಕವಾಗಿತ್ತು.
ಕೋಟೆ ನಾಡು ಚಿತ್ರದುರ್ಗ ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಲ್ಯಾಂಬರ್ಗಿ ಕಾರುಗಳು ಲೈನಿಗೆ ಒಂದರ ಹಿಂದೆ ಸಾಗುತ್ತಿದ್ದವು, ನೋಡಿವರು ಇದೇನು ಚಿತ್ರದುರ್ಗದಲ್ಲಿ ಕಾರುಗಳ ರೇಸ್ ಬಿಟ್ಟಿದ್ದಾರಾ ಎಂಬ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು, ಆದರೆ ಇದು ರೇಸ್ ಅಲ್ಲ ಬದಲಿಗೆ ಪಾಂಡಿಚೇರಿಯಿಂದ ಬಂದಂತಹ ಕಾಲೇಜು ಸ್ನೇಹಿತರೆಲ್ಲರೂ ಒಟ್ಟಿಗೆ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದು, ಎಂದು ತಿಳಿದು ಬಂದಿದ್ದು, ನೋಡುಗರ ಕಣ್ಣಿಗೆ ಮನಮೋಹಕವಾಗಿತ್ತು.
PublicNext
04/09/2021 07:35 pm