ಮುಂಬೈ: ಮಹಾರಾಷ್ಟ್ರದ ಮರಾಠವಾಡ ಹಾಗೂ ಉತ್ತರ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಪರಿಣಾಮ ಔರಂಗಾಬಾದ್‌ನ ಕನ್ನಡ್ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಸಂಚಾರ ಬಂದ್ ಆಗಿದೆ.
ಔರಂಗಾಬಾದ್‌ನಿಂದ ಚಾಲಿಸ್‌ಗಾಂವ್ ಧುಲೆಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಭೂಕುಸಿತದಿಂದಾಗಿ ಅನೇಕ ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಂಡಿವೆ. ಘಟನೆಯಲ್ಲಿ ಕೆಲವು ವಾಹನಗಳು ಹಾನಿಗೊಳಗಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ.
PublicNext
31/08/2021 05:47 pm