ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಗಸ್ಟ್ 10 ವಿಶ್ವ ಸಿಂಹಗಳ ದಿನ : ಕಾಡಿನ ರಾಜನ ಬಗ್ಗೆ ಒಂದಷ್ಟು ಮಾಹಿತಿ..

ಕಾಡಿನ ರಾಜ ಸಿಂಹಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮತ್ತು ಸಿಂಹ ಸಂತತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಆಗಸ್ಟ್ 10ನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ. ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ.

ಗಂಡು ಸಿಂಹಗಳು 226 ಕೆಜಿಯವರೆಗೆ ತೂಗುತ್ತವೆ ಮತ್ತು ಎಂಟು ಅಡಿ ಉದ್ದದವರೆಗೆ ಬೆಳೆಯುತ್ತವೆ. ಗಂಡು ಸಿಂಹಗಳು ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ದಪ್ಪ ಕೂದಲುಗಳನ್ನು ಹೊಂದಿರುತ್ತವೆ. ನೋಡುತ್ತಲೆ ಭಯತರಿಸುವಂತೆ ಕಾಣುತ್ತವೆ.

ಹೆಣ್ಣು ಸಿಂಹಗಳು ಚಿಕ್ಕದಾಗಿರುತ್ತವೆ ಮತ್ತು ವೇಗವಾಗಿ ಭೇಟೆಯಾಡುತ್ತವೆ. ಅಲ್ಲದೆ ಜೊತೆಗಾತಿಯರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತವೆ. ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಮತ್ತು ಝೂನಲ್ಲಿ 25 ವರ್ಷ ಬದುಕುತ್ತದೆ.

ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ವೇಳೆ ಬೇಟೆಯಾಡುತ್ತವೆ. ಕತ್ತಲೆಯಲ್ಲಿ ಈ ಪ್ರಾಣಿಗಳ ಕಣ್ಣುಗಳು ಭಾರೀ ಚುರುಕಿನಿಂದ ಕೆಲಸ ಮಾಡುತ್ತವೆ.

ಭಾರತದಲ್ಲಿ 2015 ರ ಸಿಂಹಗಳ ಜನನಸಂಖ್ಯೆ ಸಮೀಕ್ಷೆಯಲ್ಲಿ 523 ಗಳಿವೆ ಎಂದು ವರದಿಯಾಗಿತ್ತು. ಆದರೆ 2020 ರಲ್ಲಿ ಜನನಸಂಖ್ಯೆ 674 ಕ್ಕೆ ಏರಿದೆ.

ಸದ್ಯ ಐ ಎಫ್ ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಸಿಂಹಗಳ ಮುದ್ದಾದ ವಿಡಿಯೋವೊಂದನ್ನು ಟ್ವಿಟ್ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

10/08/2021 03:49 pm

Cinque Terre

79.28 K

Cinque Terre

1

ಸಂಬಂಧಿತ ಸುದ್ದಿ