ದೆಹಲಿ: ದಕ್ಷಿಣ ಪೆಸಿಫಿಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಲ್ಲಿ ಸುನಾಮಿ ಉಂಟಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಆಸ್ಟ್ರೇಲಿಯಾದ ಮುಖ್ಯ ಭೂಭಾಗದಿಂದ ಪೂರ್ವಕ್ಕೆ ಸುಮಾರು 550 ಕಿಲೋಮೀಟರ್ (340 ಮೈಲಿ) ದೂರದಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಇದರಿಂದ ಅಪಾಯವಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಟ್ವೀಟ್ ಮೂಲಕ ಎಚ್ಚರಿಸಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ದಕ್ಷಿಣ ಪೆಸಿಫಿಕ್‌ನಲ್ಲಿ ಭೂಕಂಪ ಸಂಭವಿಸಿದ್ದು, ನ್ಯೂಜಿಲೆಂಡ್, ವನವಾಟು, ನ್ಯೂ ಕ್ಯಾಲೆಡೋನಿಯಾ ಮತ್ತು ಈ ಪ್ರದೇಶದ ಇತರ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.
PublicNext
11/02/2021 09:52 am