ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಉತ್ತರಾಖಂಡ್ ನ ಧೌಲಿಗಂಗಾದಲ್ಲಿ ಹಿಮಸ್ಫೋಟ, ಪ್ರವಾಹದ ಅಬ್ಬರಕ್ಕೆ ಗ್ರಾಮಗಳು ಮುಳುಗುವ ಭೀತಿ..

ಉತ್ತರಾಖಂಡ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿಗ್ರಾಮದಲ್ಲಿ ಭಾರೀ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಇಲ್ಲಿನ ತಪೋವನ ಪ್ರದೇಶದಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ.

ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿ ಹೋಗಿವೆ. ದೌಲಿಗಂಗಾ, ಅಲಕನಂದಾ ನದಿ ಪಾತ್ರದ ಗ್ರಾಮಗಳು ಮುಳುಗುವ ಭೀತಿಯಲ್ಲಿದ್ದು, ಜಿಲ್ಲಾಡಳಿತ ಈ ಭಾಗದ ಗ್ರಾಮದ ಜನರನ್ನು ಸ್ಥಳಾಂತರ ಮಾಡಲು ಮುಂದಾಗಿದೆ. ಚಮೋಲಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ದೇವಾಲಗಳು ಜಲಾವೃತಗೊಂಡಿವೆ. ಇನ್ನು ಉತ್ತರಾಖಂಡ್ ನ 5 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಚಮೋಲಿ ಜಿಲ್ಲೆಯ ರಿಣಿ ಎಂಬ ಊರಿನ ಸುತ್ತಮುತ್ತ ದಿಢೀರ್ ಭೀಕರ ಮಳೆಯಾದ ಪರಿಣಾಮ ಈ ಪ್ರವಾಹ ಸ್ಥಿತಿ ಉದ್ಭವಿಸಿದೆ. ಇಡೀ ಊರಿಗೆ ಊರೇ ಕೊಚ್ಚಿಹೋಗುವ ಭೀತಿ ಇದೆ. ಅಮರ್ ಉಜಾಲಾ ವಾಹಿನಿಯ ವರದಿ ಪ್ರಕಾರ ಸಾವು ನೋವಿನ ಅಂಕಿ-ಅಂಶ ಸಿಕ್ಕಿಲ್ಲವಾದರೂ ಸುಮಾರು 50-75 ಮಂದಿ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ಧಾರೆ. ಎನ್ ಡಿಆರ್ ಎಫ್ ತಂಡಗಳೂ ಸ್ಥಳಕ್ಕೆ ದೌಡಾಯಿಸಿವೆ.

ರಿನಿ ಗ್ರಾಮದಲ್ಲಿ ನಡೆಯುತ್ತಿದ್ದ ರಿಷಿಗಂಗಾ ಪ್ರಾಜೆಕ್ಟ್ ಗೂ ಧಕ್ಕೆಯಾಗಿರುವ ಸಾಧ್ಯತೆ ಇದೆ. ಅಲಕನಂದಾ ನದಿ ಪಾತ್ರದ ಕೆಳಗಿನ ಪ್ರದೇಶಗಳಲ್ಲೂ ಪ್ರವಾಹ ಹರಿಯುವ ಮುನ್ಸೂಚನೆ ಇದೆ. ಅಲಕನಂದಾ ನದಿ ಪಾತ್ರದಲ್ಲಿರುವ ಹಳ್ಳಿಗಳಿಗೆ ಅಲರ್ಟ್ ನೀಡಲಾಗಿದ್ದು, ಅವರನ್ನ ಸ್ಥಳದಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

Edited By : Nirmala Aralikatti
PublicNext

PublicNext

07/02/2021 01:39 pm

Cinque Terre

73.79 K

Cinque Terre

1