ಮುಂಬೈ: ಕಳೆದ ವರ್ಷ ಪಶ್ಚಿಮ ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಕಪ್ಪು ಚಿರತೆಯನ್ನು ಗುರುತಿಸಿದ ವನ್ಯಜೀವಿ ಛಾಯಾಗ್ರಾಹಕ ಅನುರಾಗ್ ಗವಾಂಡೆ, ಇತ್ತೀಚೆಗೆ ಅದೇ ಅಪರೂಪದ ಕಪ್ಪು ಚಿರತೆಯನ್ನು ಮತ್ತೆ ಗುರುತಿಸಿ ಸರಣಿ ಫೋಟೋಗಳನ್ನು ಮತ್ತು ವಿಡಿಯೋವನ್ನು ಸಹ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನುರಾಗ್ ಗವಾಂಡೆ, "ಇದು ಆಶ್ಚರ್ಯಕರವಾಗಿತ್ತು. ಏಕೆಂದರೆ ನಾವು ಹುಲಿಯನ್ನು ನೋಡುತ್ತೇವೆ ಎಂದು ಭಾವಿಸಿದ್ದೆವು. ಆದರೆ ಕಪ್ಪು ಚಿರತೆ ಹಾದಿಯಲ್ಲಿ ಅಡ್ಡಾಡುವುದನ್ನು ನಾವು ನೋಡಿದೆವು. ನಾನು ಅದನ್ನು ನೋಡುವಾಗ ಅದೇ ಥ್ರಿಲ್ ಅನುಭವಿಸಿದೆ. ಈ ಬಾರಿ ಅದರ ಕ್ಷಣದ ಬಗ್ಗೆ ನನಗೆ ತಿಳಿದಿತ್ತು. ನಾವು ನಮ್ಮ ವಾಹನವನ್ನು ದೂರದಲ್ಲಿ ನಿಲ್ಲಿಸಿ, ಅದು ಸ್ಥಳದಿಂದ ಚಲಿಸದಂತೆ ಸಾಕಷ್ಟು ದೂರವನ್ನು ಇಟ್ಟುಕೊಂಡಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.
PublicNext
04/02/2021 07:47 am