ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆತ್ತವರಿಗೆ ಕೇಳದಿರಿ ಈ ಪ್ರಶ್ನೆ..ಬದುಕು ಚಿಕ್ಕದು.. ಪ್ರತಿ ಕ್ಷಣ ಪ್ರೀತಿಸಿ..

ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಹೆತ್ತವರಿಗೆ ಕೇಳುವು ಅತ್ಯಂತ ಕಠೋರವಾದ ಪ್ರಶ್ನೇ ಅಂದ್ರೆ ನೀವು ನಮಗಾಗಿ ಏನು ಮಾಡಿದ್ದಿರಿ ಎಂದು.. ಅಂತವರಿಗೆ ಉತ್ತರ ನೀಡಿದೆ ಈ ಪಕ್ಷಿಯ ವಿಡಿಯೋ ನೀವು ವಿಡಿಯೋದಲ್ಲಿ ನೋಡಿ ರಕ್ತ ಹೆಪ್ಪುಗಟ್ಟುವಂತಹ ಮಂಜು ಸುರಿಯುತ್ತಿದೆ.

ಮಂಜಿನಡಿಯಲ್ಲಿ ಪಕ್ಷಿ ಮರೆಯಾಗಿ ಹೋಗಿದೆ ಆದ್ರೆ ಮಂಜಿನ ಮಧ್ಯೆಯೇ ಮರಿಗಳಿ ಗರಿಬಿಚ್ಚಿ ಕಾವು ನೀಡುತ್ತಿರುವ ಪಕ್ಷಿ ತನ್ನ ಕಂದಮ್ಮಗಳ ಆರೈಕೆಗಾಗಿ ಶ್ರಮಿಸುತ್ತಿದೆ.

ಪ್ರತಿಯೊಬ್ಬರ ತಂದೆ ತಾಯಿಗಳು ಹಾಗೆ ತಮ್ಮ ಮಕ್ಕಳ ಒಳಿತಿಗಾಗಿ ತಮ್ಮನ್ನು ತಾವು ತ್ಯಾಗ ಮಾಡಿಕೊಂಡಿರುತ್ತಾರೆ.

ಭೂತ ಕಾಲವನ್ನು ಮರೆತ ಮಕ್ಕಳು ವರ್ತಮಾನದಲ್ಲಿ ನಿಂತು ಹೆತ್ತವರನ್ನು ಪ್ರಶ್ನಿಸುತ್ತಾರೆ.

ಅಮ್ಮನ ಪ್ರೇಮವನ್ನು ಹಸುಳೆ ಇರುವಾಗಲೇ ತಿಳಿದುಕೊಳ್ಳುತ್ತೇವೆ ಆದರೆ ಅಪ್ಪನ ಪ್ರೇಮವನ್ನು ತಿಳಿದು ಕೊಳ್ಳುವುದು ಅವರು ತಂದೆ ಆದಾಗಲೇ ಅದರ ಅನುಭವವಾಗುತ್ತದೆ ಹಾಗಾಗಿ ನಿಮ್ಮ ತಂದೆ-ತಾಯಿಯನ್ನು ಗೌರವಿಸಿ ಪ್ರೀತಿಸಿ.. ನೋಯಿಸಬೇಡಿ.

ನಿಮಗಾಗಿ ಅವರು ಏನು ಮಾಡಿದ್ದಾರೆ ಎಂದು ಕೇಳದಿರಿ ಅವರಿಗಾಗಿ ನೀವೇನು ಮಾಡಿದ್ದೀರಿ ಯೋಚಿಸಿ.. ಜೀವನದ ಪ್ರತಿ ಕ್ಷಣ ಆನಂದಿಸಿ..

Edited By : Nagesh Gaonkar
PublicNext

PublicNext

06/01/2021 03:11 pm

Cinque Terre

66.4 K

Cinque Terre

6

ಸಂಬಂಧಿತ ಸುದ್ದಿ