ಪರಿಸರ ಉಳಿಸಿ ಬೆಳೆಸುವ ಬಗ್ಗೆ ಅನೇಕರು ಮಾತನಾಡುತ್ತಾರೆ. ವಿವಿಧ ಜಾಗೃತಿಗಳನ್ನು ಮೂಡಿಸುತ್ತಾರೆ. ಪುಸ್ತಕಗಳಲ್ಲಿಯೂ ಬರೆಯುತ್ತಾರೆ.ಆದರೆ ಮಾತನಾಡಿದಂತೆ ನಡೆದುಕೊಳ್ಳುವವರು ತೀರಾ ವಿರಳ.ಸದ್ಯ ತಮ್ಮಷ್ಟಕ್ಕೆ ತಾವು ಪರಿಸರ ಕಾಳಜಿ ಮೆರೆದ ಆಟೋ ಚಾಲಕರೊಬ್ಬರ ಫೊಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಆಟೋ ಚಾಲಕ ತನ್ನ ರಿಕ್ಷಾದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಮಿನಿ ಗಾರ್ಡನ್ ಮಾಡಿದ್ದಾರೆ. ಇಂಟರ್ನೆಟ್ ಈ ಕಲ್ಪನೆಯನ್ನು ಇಷ್ಟಪಟ್ಟಿದೆ. ಜನರ ಜೀವನಶೈಲಿ, ಪರಿಸರ ಪ್ರೇಮ, ಮನೋರಂಜನೆ ಬದುಕಿನ ಪಾಠ ಎಲ್ಲವನ್ನು ಇಂಟರ್ ನೆಟ್ ನಮಗೆ ಕಲಿಸುತ್ತಿದೆ.
ಹಾಗೆಯೇ ಇಲ್ಲೊಂದು ಫೋಟೋದಲ್ಲಿ ಆಟೋ ಚಾಲಕರೊಬ್ಬರ ಪರಿಸರ ಪ್ರೇಮವನ್ನು ಜಗತ್ತಿಗೆ ತಿಳಿಸಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಿಕ್ ಸೋಲ್ಹೈಮ್ ಎಂಬವರು ಪೋಸ್ಟ್ ಮಾಡಿದ ಈ ಫೋಟೋದಲ್ಲಿ ಒಂದು ಸಾಮಾನ್ಯ ಆಟೋವನ್ನು ಸಂಪೂರ್ಣ ಹುಲ್ಲು ಮತ್ತು ಸಸ್ಯಗಳ ಪದರದಿಂದ ಆವೃತವಾಗಿರುವಂತೆ ಮಾಡಲಾಗಿದೆ. ತಮ್ಮ ಬದುಕನ್ನು ಹೇಗೆ ಆಸಕ್ತಿದಾಯಕ ಆಗಿಸಬಹುದು ಎಂಬುದಕ್ಕೆ ಈ ಆಟೋ ಚಾಲಕ ಉದಾಹರಣೆಯಾಗಿದ್ದಾರೆ.ಸದ್ಯ ಈ ಫೋಟೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
PublicNext
08/04/2022 07:49 pm