ಬ್ರೆಜಿಲ್: ರಸ್ತೆ ಮಧ್ಯೆಯೇ ದಿಢೀರ್ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ದೈತ್ಯಾಕಾರದ ಅನಕೊಂಡವನ್ನು ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಇದು ಬ್ರೆಜಿಲ್ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೈತ್ಯಾಕಾರದ ಅನಕೊಂಡ ರಸ್ತೆ ದಾಟುತ್ತಿದ್ದ ಪರಿಣಾಮ ಕೆಲಹೊತ್ತು ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಸುಮಾರು ಹತ್ತು ನಿಮಿಷಗಳ ಕಾಲ ವಾಹನಗಳು ಎಲ್ಲವೂ ರಸ್ತೆಯ ಮಧ್ಯೆಯಲ್ಲೇ ನಿಂತಿದ್ದವು.
ಅದೃಷ್ಟವಶಾತ್ ದೈತ್ಯಾಕಾರದ ಹಾವು ಯಾರಿಗೂ ಯಾವುದೇ ಹಾನಿ ಮಾಡದೆ ರಸ್ತೆ ದಾಟಿದೆ. ಇದಕ್ಕೆ ವಾಹನ ಸವಾರರು ಕೂಡ ಅನುವು ಮಾಡಿಕೊಟ್ಟಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
PublicNext
26/08/2021 01:23 pm