ಚಮೋಲಿ: ಉತ್ತರಾಖಂಡದ ಹಿಮ ಕುಸಿತದಿಂದ ತೀವ್ರ ಪ್ರವಾಹ ಉಂಟಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಘಟನೆ ನಡೆದು ಒಂದು ವಾರ ಕಳೆದರೂ ರಕ್ಷಣಾ ಕಾರ್ಯ ಮುಂದುವರಿದಿದೆ.
ಚಮೋಲಿ ಜಿಲ್ಲೆಯ ತಪೋವನದಲ್ಲಿ ರಕ್ಷಣಾ ಕಾರ್ಯಾಚರಣೆ ಇಂದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ 36 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 204 ಮಂದಿ ಕಣ್ಮರೆಯಾಗಿದೆ ಎಂದು ಉತ್ತರಾಖಂಡದ ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಬಡೋರಿಯಾ ತಿಳಿಸಿದ್ದಾರೆ.
ಈ ದುರಂತದಲ್ಲಿ ಕಣ್ಮರೆಯಾದವರಿಗಾಗಿ ನಮ್ಮ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ನದಿ ಹಾಗೂ ನದಿ ತಟದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎನ್ ಡಿ ಆರ್ ಎಫ್ ಕಮಾಂಡರ್ ಪಿಕೆ ತಿವಾರಿ ಹೇಳಿದ್ದಾರೆ.
PublicNext
12/02/2021 10:14 am