ಕೆಂಗುಲಾಬಿ ಕಂಡ್ರೆ ಯಾರಿಗೆ ತಾನೆ ಇಷ್ಟಾ ಆಗಲ್ಲ ಹೇಳಿ.... ಅದೊಂದು ಪ್ರೀತಿಯ ಸಂಕೇತ... ಅಂತಹ ಗುಲಾಬಿಯ ಮೇಲೆ ವಿಷಕಾರಿ ನೀಲಿ ಹಾವಿಗೂ ಲವ್ ಆಗಿದೆ.
ಹೌದು. ಹಾವೊಂದು ಗುಲಾಬಿಯನ್ನು ತಬ್ಬಿಕೊಂಡು ಕುಳಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 12 ಸೆಕೆಂಡ್ಗಳ ವಿಡಿಯೋದಲ್ಲಿ ನೀಲಿ ಬಣ್ಣದ ಹಾವು ಗುಲಾಬಿಯ ಮೇಲೆ ಕುಳಿತಿರುವ ದೃಶ್ಯವನ್ನು ಕಾಣಬಹುದಾಗಿದೆ.
ಹೂವುಗಳ ಮೇಲೆ ಜೇಣು ನೋಣ, ದುಂಬಿ, ಚಿಟ್ಟೆಗಳು ಬಂದು ಕುಳಿತುಕೊಳ್ಳುವುದನ್ನು ನಾವು ಕಂಡಿದ್ದೆವೆ. ಆದ್ರೆ ಕೆಂಪು ಗುಲಾಬಿಯ ಮೇಲೆ ನೀಲಿ ಬಣ್ಣದ ವೈಪರ್ ಹಾವು ಕುಳಿತಿರುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಲೈಫ್ ಆಫ್ ಅರ್ತ್ ಎಂಬ ಟ್ವಿಟರ್ ಅಕೌಂಟ್ನಲ್ಲಿ ಟ್ವೀಟ್ ಮಾಡಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಾವ್... ಅದ್ಬುತ... ಮುಟ್ಟಿ ಮುದ್ದಾಡಬೇಕೆನ್ನುವ ಗುಲಾಬಿಗೆ ಸರ್ಪ ಕಾವಲು ನಿಂತಿದೆ ಎಂದು ಕೆಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ವೈಪರ್ ಹಾವು ತುಂಬ ಅಪಾಯಕಾರಿ, ಮೈಮೇಲೆ ಹಾರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
19/09/2020 07:32 pm