ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನೀರಿನಲ್ಲಿ ನಡೆದುಕೊಂಡು ಬಂದ ತುಂಬು ಗರ್ಭಿಣಿ!

ವರದಿ- ಈರನಗೌಡ ಪಾಟೀಲ

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ವರದಾ ನದಿ ತುಂಬಿ ಹರಿಯುತ್ತಿದೆ. ಬೆಳವಿಗಿ ಹಾಗೂ ನೀರಲಗಿ ಗ್ರಾಮದ ಸೇತುವೆ ಮುಳುಗಡೆಗೊಂಡಿದೆ. ಸೇತುವೆಯ ಮೇಲೆ ಸಿಲುಕಿದ ಆ್ಯಂಬುಲೆನ್ಸ್ ನಿಂದ ಆಸ್ಪತ್ರೆಗೆ ತೆರಳಲಾಗದೆ ತುಂಬು ಗರ್ಭಿಣಿ ಮಹಿಳೆಯ ಪರದಾಡುವಂತ ಪರಿಸ್ಥಿತಿ ಎದುರಾಯಿತು.

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥಕರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ಗುಯಿಲುಗುಂದಿ ಗ್ರಾಮದಿಂದ ವಾಪಸ್ಸು ಹಾವೇರಿಗೆ ಬರುವಾಗ ಹೆಚ್ಚಾಗಿರುವ ವರದಾ ನದಿ ನೀರಿನಿಂದ ಆ್ಯಂಬುಲೆನ್ಸ್ ಗೆ ತೆರಳಲು ಸಾಧ್ಯವಾಗಿಲ್ಲ. ಇದರಿಂದ ತುಂಬು ಗರ್ಭಿಣಿ ಪ್ರವಾಹದ ನೀರಿನಲ್ಲಿ ನಡೆದುಕೊಂಡು ದಡ ಸೇರಿದ್ದಾಳೆ. ಗರ್ಭಿಣಿ ಮಹಿಳೆಯನ್ನು ಹರಿಯುವ ನೀರಿನಲ್ಲಿ ಸುರಕ್ಷಿತವಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ಕರೆತಂದಿದ್ದಾರೆ.

Edited By : Manjunath H D
PublicNext

PublicNext

17/07/2022 10:32 am

Cinque Terre

83.02 K

Cinque Terre

6