ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಗಂಗಾ ಸೇರಿದಂತೆ ಬಿಹಾರದ ನದಿಗಳಲ್ಲಿ ನೀರಿನ ಮಟ್ಟವು ಗಣನೀಯವಾಗಿ ಏರಿಕೆಯಾಗಿದೆ. ಗಂಗಾ ನದಿ ರಭಸವಾಗಿ ಹರಿದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಈ ಮಧ್ಯೆ ಗಂಗಾನದಿಯಲ್ಲಿ ಆನೆ ಹಾಗೂ ಮಾವುತ ಸಿಲುಕಿಕೊಂಡಿದ್ದರು. ಆದರೆ ಇಂತಹ ಕಠಿಣ ಪರಿಸ್ಥಿತಿಯನ್ನೂ ಲೆಕ್ಕಿಸದ ಆನೆ ನದಿಯಲ್ಲಿ ಮುಳುಗುತ್ತ, ಏಳುತ್ತಾ ಸುಮಾರು 3 ಕಿಲೋ ಮೀಟರ್ ಈಜುವ ಮೂಲಕ ದಡ ಸೇರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
PublicNext
13/07/2022 05:40 pm