ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್, ಯಾದಗಿರಿ
ಯಾದಗಿರಿ: ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿರೋ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ.
ಭಾರೀ ಮಳೆಯಾಗಿದ್ದರಿಂದ ಕೆರೆ ಕೊಡಿಗಳು ತುಂಬಿ ಹರಿಯುತ್ತಿದ್ದು, ಗೆದ್ದಲಮರಿ ಹಾಗೂ ಬಲಶೆಟ್ಟಿಹಾಳ ಗ್ರಾಮದ ಲ್ಲಿ 20ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಾಲಾವೃತಗೊಂಡಿವೆ.
ಅಲ್ಲದೇ.. ಮೆನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ನೀರುಪಾಲಗಿದ್ದು, ಅಂಗಡಿ ಮುಂಗಟ್ಟಗಳು ನೀರು ಹೊಕ್ಕಿ ನದಿಯಂತಾಗಿವೆ.
ಬಿಟ್ಟು ಬಿಡದೇ ಆರ್ಭಟಿಸಿದ ವರುಣನಿಂದ ಜನರು ಹಾಗೂ ರೈತರು ಸಂಕಷ್ಟ ಅನುಭವಿಸುವಂತೆ ಆಗಿದೆ. ಮತ್ತೊಂದೆಡೆ ಕೊಡೇಕಲ್ ಸಮೀಪದ ಮನ್ನನಾಯಕ ತಾಂಡಾದಲ್ಲಿ ರೈತ ಶೇಕರಪ್ಪ ಅವರ ಜಮೀನಿನಲ್ಲಿ ಬೆಳೆದ ಸಜ್ಜಿ ಬೆಳೆ ಸಂಪೂರ್ಣ ಜಾಲಾವೃತಗೊಂಡಿವೆ.
ಇನ್ನು ಗೆದ್ದಲಮರಿ ಗ್ರಾಮಕ್ಕೆ ಬಿಜೆಪಿ ಯುವ ಮುಖಂಡ ಬಬ್ಲುಗೌಡ ಅವರು, ಭೇಟಿ ನೀಡಿ ಜನರ ಕಷ್ಟ ಆಲಿಸಿದರು. ಜೊತೆಗೆ ನಷ್ಟವಾದ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದರು.
PublicNext
21/09/2021 03:31 pm