ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲ ತೀರದಲ್ಲಿ ತೇಲಿ ಬಂದ ಬಂಗಾರ ಬಣ್ಣದ ರಥ: ಏನಿದು ವಿಚಿತ್ರ?

ಶ್ರೀಕಾಕುಳಂ: ಬಂಗಾರ ಬಣ್ಣದ ರಥವೊಂದು ಸಮುದ್ರದಲ್ಲಿ ತೇಲುತ್ತ ಕಡಲ ತೀರದತ್ತ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ರಥವನ್ನು ಎಳೆದು ತೀರಕ್ಕೆ ತಂದಿದ್ದಾರೆ. ಅಸನಿ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈ ಕಾರಣದಿಂದ ಥೈಲ್ಯಾಂಡ್ ಅಥವಾ ಮಾಯನ್ಮಾರ್ ದೇಶಗಳ ಕಡಲ ತೀರದಿಂದ ಈ ರಥವು ತೇಲಿ ಬಂದಿರಬಹುದೆಂದು ಊಹಿಸಲಾಗಿದೆ.

ತೀರದಲ್ಲಿ ರಥವನ್ನು ಕಂಡ ಮೀನುಗಾರರು ಹಗ್ಗ ಕಟ್ಟಿ ದಡಕ್ಕೆ ಎಳೆತಂದಿದ್ದಾರೆ. ರಥದ ಆಕಾರ ಬೌದ್ಧ ಚೈತ್ಯಾಲಯದ ತೇರಿನಂತೆ ಹೋಲುತ್ತಿದೆ.

Edited By : Nagaraj Tulugeri
PublicNext

PublicNext

11/05/2022 04:03 pm

Cinque Terre

77.37 K

Cinque Terre

6