ಸೀಗಿ ಹುಣ್ಣಿಮೆ ಅಂದ್ರೆ ರೈತರ ಸಮುದಾಯಕ್ಕೆ ಸಂಭ್ರಮೋ ಸಂಭ್ರಮ. ಯಾಕೆಂದ್ರೆ ವರ್ಷಾನುಗಟ್ಟಲೆ ದುಡಿದ ದೇಹಗಳು ಸಂಭ್ರಮಿಸುವ ಸುದಿ ಈ ದಿನ. ಅನ್ನ ನೀಡುವ ಭೂ ತಾಯಿಗೆ ಸೀಮಂತ ಮಾಡಿ ಉಣ ಬಡಿಸುವ ಸಂತಸದ ದಿನ.
ಗದಗ ಜಿಲ್ಲೆ ಮಸಾರಿ ಭಾಗದಲ್ಲಿ ಹೆಚ್ಚು ಈ ಹಬ್ಬ ಆಚರಿಸುತ್ತಾರೆ. ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಹೂಡಿಕೊಂಡು ಸಾಲು ಸಾಲಾಗಿ ಹೋರಟ್ರೇ ವ್ಹಾ! ಅದೆಷ್ಟು ಚೆಂದ. ಮನೆಯ ಸಂಬಂಧಿಕರೆಲ್ಲಾ ಬಗೆ ಬಗೆಯ ಅಡುಗೆ ಮಾಡಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗುತ್ತಾರೆ.
ಬನ್ನಿ ಮರಕ್ಕೆ ಸೀರೆ ತೊಡಿಸಿ ಉಡಿತುಂಬಿ, ಕೈಗೆ ಕಂಕಣಕಟ್ಟಿ ಐದು ಕಲ್ಲುಗಳನಿಟ್ಟು ಪಂಚಪಾಂಡವರೆಂದು ಪೂಜೆ ಮಾಡ್ತಾರೆ. ನೈವೇದ್ಯದ ಮೂಲಕ ಪೂಜೆ ಮಾಡಿ ಹುಲ್ಲಲಿಗೂ... ಸುರಾಂಬ್ಲಿಗೋ ಅಂತ ಸಿಹಿತಿನಸುಗಳನ್ನ ಸುತ್ತ ಎರಚಿ ಮಳೆಬೆಳೆ ಚೆನ್ನಾಗಿ ಆಗಲೆಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ ಅನ್ನದಾತರು..
ಒಟ್ಟಾರೆಯಲ್ಲಿ ಈ ಸೀಗಿ ಹುಣ್ಣಿಮೆಯಂದು ಭೂತಾಯಿಗೆ ಸಿಮಂತ ಮಾಡುವ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ವರ್ಷಾನುಗಟ್ಟಲೆ ಸಮಸ್ಯೆಗಳ ಸರಮಾಲೆಯಲ್ಲಿ ಬಳಲಿದ ರೈತ ಇಂದು ಸಂತಸದಿಂದ ಹಬ್ಬ ಆಚರಿಸುವುದೇ ವಿಶೇಷ
PublicNext
20/10/2021 09:20 pm