ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಾಯಾವಿ ಚಿರತೆಯನ್ನು ಹಿಡಿಯಲು ಮಧ್ಯರಾತ್ರಿ ಬಂದ ಗಜ

ಬೆಳಗಾವಿ: ಇಲ್ಲಿಯ ಗಾಲ್ಫ್ ಮೈದಾನದಲ್ಲಿ 20 ದಿನಗಳಿಂದ ಅರಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬುಧವಾರ ಬೆಳಗ್ಗೆ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ. ಅರಣ್ಯ ಸಚಿವರ ಕ್ಷೇತ್ರದಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆ‌ಗಳು ಗಾಲ್ಫ್ ಕೋರ್ಸ್ ನ ಪೊದೆಯೊಳಗೆ‌ ನುಗ್ಗಿವೆ.

ವಿಶಾಲವಾದ ಗಾಲ್ಫ್ ಮೈದಾನದಲ್ಲಿ ಮರೆಯಾಗಿರುವ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆ‌ಗಳ ಮಾವುತರು ಬಂದ ಬಳಿಕ ಗಾಲ್ಫ್ ಮೈದಾನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಿವೆ. ಆನೆಯ ಮೇಲೆ ಮಾವುತರು ಹಾಗೂ ಅರವಳಿಕೆಯ ಮದ್ದು ಹಿಡಿದು ಶಾರ್ಪ್ ಶೂಟರ್ ಗಳು ಗಿಡಗಂಟಿಯಲ್ಲಿ ಇದ್ದ ಚಿರತೆ ಪತ್ತೆ ‌ಹಚ್ಚಲು ತೆರಳಲಿವೆ.

ಸಕ್ರೆಬೈಲ ನಿಂದ ಅರ್ಜುನ ಹಾಗೂ ಆಲೆ ಆನೆಗಳು ಬಂದಿವೆ. ನುರಿತ ವೈದ್ಯರು, ಅರಣ್ಯ ಇಲಾಖೆಯ ಸಹಾಯಕ ಸಿಬ್ಬಂದಿ, ಮಾವುತರು ಸೇರಿದಂತೆ ‌8 ಜನರ ತಂಡ ಆಗಮಿಸಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಎಸಿಎಫ್ ಮಲ್ಲಿನಾಥ ಕುಸನಾಳ ಮಾತನಾಡಿ, ತಡರಾತ್ರಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ನಿಂದ ಎರಡೂ ಆನೆಗಳು ಬಂದಿವೆ. ಹಿಂಡಲಗಾ ಗಣೇಶ‌‌ ಮಂದಿರ ಹಿಂಬದಿಯ ಪ್ರದೇಶದಲ್ಲಿ ಚಿರತೆಯ‌ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದರು.

ಗಿಡಗಂಟಿಯಲ್ಲಿ ಚಿರತೆ ಕುಳಿತ್ತಿದ್ದರೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೋಗದ ಜಾಗೆಯಲ್ಲಿ‌ ಆನೆಗಳು ಹೋಗುವುದರಿಂದ ಅರವಳಿಕೆ ತಜ್ಞರ ಜತೆಗೆ ಸಿಬ್ಬಂದಿಗಳು ಹೋಗಬಹುದು ಎಂದರು.

Edited By :
PublicNext

PublicNext

24/08/2022 11:40 am

Cinque Terre

28.13 K

Cinque Terre

1

ಸಂಬಂಧಿತ ಸುದ್ದಿ