ಬೆಳಗಾವಿ: ಕೇಂದ್ರ ಮೃಗಾಲಯ ಪ್ರಾಧಿಕಾರ, ನವದೆಹಲಿ ರವರ ಅನುಮೋದನೆ ಸಂಖ್ಯೆ F.N.23-7/2019-CZA(Part.I) ದಿನಾಂಕ: 15-02-2021 ರಂತೆ ಪ್ರಾಣಿ ಮಿನಿಮಯದ ಅಡಿ ಬೆಳಗಾವಿಯ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಸಿಂಹಗಳನ್ನು ಹಸ್ತಾಂತರಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮೂರು ಸಿಂಹಗಳಾದ ನಕುಲ, ಕೃಷ್ಣ ಮತ್ತು ನಿರುಪಮಗಳನ್ನು ಕೊಡುಗೆಯಾಗಿ ನೀಡಿ ಸದರಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿರುತ್ತದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ಈ ಮೂರು ಸಿಂಹಗಳು ದಿನಾಂಕ: 12-02-2010 ರಲ್ಲಿ ಗಣೇಶ ಮತ್ತು ಪ್ರೇಕ್ಷಾ ಎಂಬ ಸಿಂಹಗಳಿಗೆ ಜನಿಸಿದ್ದು, ಅದು ಪ್ರಸ್ತುತ 11 ವರ್ಷ ವಯಸ್ಸಿನದ್ದಾಗಿದೆ.
PublicNext
25/02/2021 06:35 pm