ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತಷ್ಟು ಎತ್ತರವಾದ ಎವರೆಸ್ಟ್‌..!

ನವದೆಹಲಿ: ವಿಶ್ವದ ಅತ್ಯಂತ ಎತ್ತರ ಶಿಖರ ಎವರೆಸ್ಟ್ ಪರ್ವತದ ಎತ್ತರ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಈ ಮಾಹಿತಿಯನ್ನು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಿಸಿವೆ.

ಈ ಹಿಂದೆ ಎವರೆಸ್ಟ್ ಎತ್ತರವು 8,848 ಮೀಟರ್ ಆಗಿತ್ತು. ಇದನ್ನು ಈಗ 8,848.86 ಮೀಟರ್ (29,032 ಅಡಿ‌) ಎಂದು ಅಳತೆ ಮಾಡಲಾಗಿದೆ. ನೇಪಾಳದ ವಿದೇಶಾಂಗ ಸಚಿವರು ಈ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

2019 ಅಕ್ಟೋಬರ್‌ 13ರಲ್ಲಿ ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯಲು ನೇಪಾಳ ಮತ್ತು ಚೀನ ಒಪ್ಪಂದ ಮಾಡಿಕೊಂಡಿದ್ದವು. ಇದರ ಜತೆಗೆ ಚೀನಾ ಮತ್ತು ನೇಪಾಳ ಜಂಟಿಯಾಗಿ ಜುಮ್ಲಾಂಗ್ಮಾ ಮತ್ತು ಸಾಗರಮಾಥ ಪರ್ವತದ ಎತ್ತರವನ್ನು ಘೋಷಿಸಲು ನಿರ್ಧರಿಸಿದ್ದವು. ಕಳೆದ ವರ್ಷ ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯಲು ತಂಡವನ್ನು ಕಳುಹಿಸಲಾಗಿತ್ತು. ಈ ವರ್ಷ ಮತ್ತೊಮ್ಮೆ ಎವರೆಸ್ಟ್‌ನ ಎತ್ತರವನ್ನು ಅಳೆಯಲು ಟಿಬೆಟ್‌ನಿಂದ ತಂಡವನ್ನು ಕಳುಹಿಸಲಾಗಿತ್ತು.

Edited By : Vijay Kumar
PublicNext

PublicNext

08/12/2020 06:24 pm

Cinque Terre

26.54 K

Cinque Terre

1

ಸಂಬಂಧಿತ ಸುದ್ದಿ