ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಹಲವಡೆ ತುಂತುರು ಮಳೆ:ಪ್ರತಿಭಟನೆಗೆ ಅಡ್ಡಿಯಾಗುವ ಆತಂಕ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೇ ತುಂತುರು ಮಳೆ ಸುರಿಯುತ್ತಿದೆ.

ನಿವಾರ್ ಮತ್ತೆ ಬುರೇವಿ ಚಂಡ ಮಾರುತದ ಬಳಿಕ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಉಂಟಾಗಿದೆ. ಈ ಚಂಡಮಾರುತ ಭಾರತ ಸೇರಿದಂತೆ 13 ದೇಶಗಳ ಮೇಲೆ ಅಪ್ಪಳಿಸಲಿದೆ. ಅದರಲ್ಲೂ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ.

ರೈತ ಸಂಘಟನೆಗಳ ಜೊತೆ ವಿವಿಧ ಸಂಘಟನೆಗಳು ಬಂದ್ ಬೆಂಬಲ ಕೊಟ್ಟಿವೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಮೂಲೆ ಮೂಲೆಯಿಂದ ರೈತರು ರ್ಯಾಲಿ ಹೊರಡುತ್ತಾರೆ. ಈ ತುಂತುರು ಮಳೆ ಮುಂದುವರಿದರೆ ಇಂದಿನ ಹೋರಾಟಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮಳೆ- ಗಾಳಿಗೂ ಜಗ್ಗದೇ ರೈತರು ಮತ್ತು ವಿವಿಧ ಸಂಘಟನೆಗಳು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿ ಹೋರಾಟ ಮಾಡೋದು ಪಕ್ಕಾ ಆಗಿದೆ. ಆದರೆ ಈ ತುಂತುರು ಮಳೆ ನಿಲ್ಲುತ್ತಾ ಅಥವಾ ಇಡೀ ಮುಂದುವರಿಯುತ್ತಾ ಕಾದು ನೋಡಬೇಕಿದೆ.

Edited By : Nagaraj Tulugeri
PublicNext

PublicNext

08/12/2020 08:04 am

Cinque Terre

83.71 K

Cinque Terre

1