ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡಗುತ್ತಿದೆ ರಾಜ್ಯ : ಬೀದರ್ ನಲ್ಲಿ ಕನಿಷ್ಠ ತಾಪಮಾನ ದಾಖಲು

ಬೆಂಗಳೂರು : ಕೊರೊನಾದಿಂದ ಮುದ್ದಿಯಾಗಿದ್ದ ಜನ ಸದ್ಯ ಚಳಿಯಿಂದ ನಡಗುತ್ತಿದ್ದಾರೆ.

ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಉತ್ತರ ಒಳನಾಡಿನ ಬೀದರ್ ನಲ್ಲಿ ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ವಾಡಿಕೆಯಂತೆ ನ.10ರಂದು ಬೀದರ್ ಜಿಲ್ಲೆಯಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬೇಕು.

ಆದರೆ 11.1ರಷ್ಟು ಅತೀ ಕಡಿಮೆ ಅಂದರೆ ಕನಿಷ್ಠ 7.6 ಡಿ.ಸೆ. ದಾಖಲಾಗಿದೆ. ಇನ್ನು ಗರಿಷ್ಠ ವಾಡಿಕೆಗಿಂತ 1.7ರಷ್ಟು ಕಡಿಮೆ (27.8 ಡಿಗ್ರಿ ಸೆಲ್ಸಿಯಸ್) ತಾಪಮಾನ ದಾಖಲಾಗಿದೆ.

ಉತ್ತರ ಒಳನಾಡಿನಲ್ಲಿ ಚಳಿಯ ವಾತಾವರಣ ಹೆಚ್ಚಾಗುತ್ತಿದೆ. ವಿಜಯಪುರ 11 ಡಿಗ್ರಿ ಸೆಲ್ಸಿಯಸ್, ಧಾರವಾಡ 14, ಹಾವೇರಿ ಹಾಗೂ ರಾಯಚೂರಿನಲ್ಲಿ ತಲಾ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಹೀಗಾಗಿ ಈ ಭಾಗದ ಜಿಲ್ಲೆಗಳಲ್ಲಿ ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದರೆ, ಮಧ್ಯಾಹ್ನದ ವೇಳೆಗೆ ಎಲ್ಲ ಕಡೆಗಳಲ್ಲಿ ಒಣ ಹವೆ ಉಂಟಾಗುತ್ತಿದೆ.

ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ನ.14ರವರೆಗೆ ಒಣ ಹವೆ ಮುಂದುವರಿಯಲಿದೆ.

ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Edited By : Nirmala Aralikatti
PublicNext

PublicNext

11/11/2020 11:34 am

Cinque Terre

37.61 K

Cinque Terre

0