ತುಮಕೂರು: ತಾಲೂಕಿನ ಉದ್ದಪ್ಪನ ಪಾಳ್ಯದ ಸಮೀಪದ ಹಳ್ಳದ ನೀರಿನಲ್ಲಿ ಭಾನುವಾರ ಸಿಲುಕಿಕೊಂಡ ಹಾಲಿನ ಕ್ಯಾನ್ ತುಂಬಿಕೊಂಡಿದ್ದ ಆಟೋ ಆಟೋಚಾಲಕನ ರಕ್ಷಣೆಯನ್ನು ಸ್ಥಳೀಯರು ಮಾಡಿದ್ದಾರೆ.
ಪಾವಗಡ ತಾಲೂಕಿನ ಸಿ ಕೆ ಪುರ ಗ್ರಾಮದ ಕೆರೆಯಿಂದ ಕೋಡಿ ಹರಿದ ಪರಿಣಾಮ ಸಿಕೆಪುರ ಮತ್ತು ಉದ್ದಪ್ಪನ ಪಾಳ್ಯದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಂತಹ ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿತ್ತು ಆದರೆ ಆಟೋ ಚಾಲಕ ವೇಗವಾಗಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿ ಆಟೋ ಚಾಲನೆ ಮಾಡಿದ್ದಾನೆ.
ನೀರಿನ ಮಧ್ಯಭಾಗಕ್ಕೆ ಬರುವಾಗ ಆಟೋ ನೀರಿನಲ್ಲಿ ಸಿಲುಕಿಕೊಂಡು ಅಸಹಾಯಕನಾಗಿ ಸಹಾಯ ಕೋರಿದ್ದಾನೆ, ಆಟೋ ರಕ್ಷಣೆಗೆ ಸ್ಥಳೀಯ ಗ್ರಾಮಸ್ಥರು ಧಾವಿಸಿ ಆಟೋವನ್ನು ರಕ್ಷಿಸಿದ್ದಾರೆ. ಸ್ಥಳೀಯರ ರಕ್ಷಣಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು.
PublicNext
28/08/2022 10:15 pm