ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಭಾರೀ ಬಿರುಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು.!

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಸತತ ಎರಡು ದಿನಗಳಿಂದ ಬಿರುಗಾಳಿ ಸಹಿಯ ಮಳೆ ಸುರಿದ ಪರಿಣಾಮ, ವರುಣ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದಾನೆ.

ದಾವಣಗೆರೆ ತಾಲೂಕಿನ ದೊಡ್ಡ ಮಾಗಡಿ ಬಳಿ ಮಲ್ಲಿಕಾರ್ಜುನ ಎಂಬುವರ ಅಡಿಕೆ ತೋಟ ಭಾಗಶಃ ಹಾಳಾಗಿದೆ. ಮಲ್ಲಿಕಾರ್ಜುನ ಅವರ ಮೂರು ಎಕರೆ ಜಮೀನು ಇದ್ದು 13 ವರ್ಷದಿಂದ ಅಡಿಕೆ ಬೆಳೆದಿದ್ದರು. ಆದರೆ ಎರಡು ದಿನದಿಂದ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ 300ಕ್ಕೂ ಅಧಿಕ ಅಡಿಕೆ ಮರಗಳು ಧರಶಾಯಿಯಾಗಿವೆ.

ಇನ್ನೂ ಬಿದ್ದ ಮರಗಳನ್ನ ಹಗ್ಗದ ಸಹಾಯದಿಂದ ಕಟ್ಟಿದರೂ ಅಡಿಕೆ ಮರ ಧರಶಾಯಿ ಆಗುತ್ತಿದ್ದು ಅಡಿಕೆ ಮರಗಳು ಬೀಳುವುದು ನೋಡಿ ರೈತ ಮಲ್ಲಿಕಾರ್ಜುನ ಕಂಗಾಲ ಆಗಿದ್ದಾನೆ. ಇನ್ನೂ ಪಕ್ಕದ ಜಮೀನಲ್ಲಿ ಮಹೇಶಪ್ಪ ಈರಪ್ಪ ಎಂಬುವವರ ತೋಟಕ್ಕೆ ಕೂರಿಸಿದ ಟಿಸಿ, ತೋಟದ ಮನೆ ಬಿರುಗಾಳಿಗೆ ಕುಸಿದು ಬಿದ್ದಿದೆ. ಮಾಯಕೊಂಡದ ಹೊಬ್ಳಿ ಸುತ್ತಮುತ್ತ ಅನೇಕ ಕಡೆ ಅಡಿಕೆ ಮರಗಳು ಬಿದ್ದಿದ್ದು ರೈತರು ಪರಿಹಾರಕ್ಕೆ ಒತ್ತಾಯಿಸುತಿದ್ದಾರೆ. ಇನ್ನು ಮಳೆ ಹಾನಿ ವೀಕ್ಷಣೆಗೆ ಆಗಮಿಸಿದ್ದ ಸ್ಥಳೀಯ ಶಾಸಕ ಪ್ರೊ. ಲಿಂಗಣ್ಣ ಅವರು, ಶೀಘ್ರವಾಗಿ ರೈತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

Edited By :
PublicNext

PublicNext

10/05/2022 12:25 pm

Cinque Terre

74.77 K

Cinque Terre

2

ಸಂಬಂಧಿತ ಸುದ್ದಿ