ಚಿಕ್ಕಬಳ್ಳಾಪುರ:ಇಲ್ಲಿಯ ಕುಶಾವತಿ ನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ತಂದೆ-ಮಗನನ್ನ ರಕ್ಷಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.
ಸಂಬಂಧಿಕರ ಅಂತ್ಯ ಕ್ರಿಯೆ ಕಾರ್ಯಕ್ಕೆ ತೆರಳುತ್ತಿದ್ದ ತಂದೆ-ಮಗ ರಾಯಲ್ಪಾಡು ಗ್ರಾಮದಿಂದ ಚಾಕವೇಲು ಗ್ರಾಮಕ್ಕೆ ಹೋಗುತ್ತಿದ್ದರು. ಮಾರ್ಗ ಮಧ್ಯೆದ ಹೊಸಹುಡ್ಯ ಗ್ರಾಮದ ಕುಶಾವತಿ ನದಿ ತುಂಬಿ ಹರಿಯುತ್ತಿದ್ದ ಕಾರಣ, ಬೈಕ್ ಸಮೇತ ತಂದೆ-ಮಗ ಇಬ್ಬರು ಕೊಚ್ಚಿ ಹೋಗ್ತಿದ್ದರು.ಆದರೆ ಸ್ಥಳೀಯರ ಸಹಾಯದಿಂದ ಇಬ್ಬರು ಸುರಕ್ಷಿತವಾಗಿ ದಡ ಸೇರಿದ್ದಾರೆ.
PublicNext
22/11/2021 04:01 pm