ದಾಂಡೇಲಿ(ಉತ್ತರ ಕನ್ನಡ) ಕಾರವಾರ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದಿದೆ. ಮೋಹಿನ್ ಮೆಹಬೂಬ್ (15) ಮೊಸಳೆ ಪಾಲಾದ ಬಾಲಕನಾಗಿದ್ದು, ಈತ ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ.
ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸೂಪಾ ಜಲಶಾಯದಿಂದ ಹರಿದುಬರುತ್ತಿರುವ ನೀರನ್ನು ಬಂದ್ ಮಾಡಲಾಗಿದೆ.
PublicNext
24/10/2021 10:11 pm