ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾ ಮಳೆಗೆ ತತ್ತರಿಸಿದ ಬೆಂಗಳೂರು : ನದಿಯಂತಾದವು ಮಹಾನಗರದ ರಸ್ತೆಗಳು

ಬೆಂಗಳೂರು : ಮಂಗಳವಾರ ಸುರಿದ ಭಾರೀ ಮಳೆಗೆ ಗಾರ್ಡನ್ ಸಿಟಿ ನಲುಗಿ ಹೋಗಿದೆ. ಬೆಂಗಳೂರು ನಗರ ಸದ್ಯ ನದಿಯಂತೆ ಕಾಣುತ್ತಿದೆ. ಬಹುತೇಕ ಕಡೆಗಳಲ್ಲಿ ನೀರು ನುಗ್ಗಿದ ಪರಿಣಾಮ ಜನ-ಜೀವನ ಅಸ್ತವ್ಯಸ್ತವಾಗಿದೆ.

ನಗರದ ಹೊಸಕೆರೆಹಳ್ಳ ಸಮೀಪದ ಗುರುದತ್ತ ಲೇಔಟ್ ಬಳಿ ರಾಜಕಾಲುವೆಯ ಗೋಡೆ ಕುಸಿದಿದೆ. ಮತ್ತು ಹಲವೆಡೆ ಮರಗಳು ನೆಲಕ್ಕಪ್ಪಳಿಸಿದ ಬಗ್ಗೆ ಮಾಹಿತಿ ಇದೆ. ಒಟ್ಟು 75 ಮಿ.ಮೀ ನಿಂದ 128ಮಿ.ಮೀ ವರೆಗೆ ಮಳೆಯಾದ ಬಗ್ಗೆ ವರದಿಯಾಗಿದೆ.

ಮಂಗಳವಾರ ಸಂಜೆಯಿಂದ ಆರಂಭವಾದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ನಗರದ 30 ವಾರ್ಡುಗಳ ಪ್ರದೇಶಗಳಲ್ಲಿ ಸುರಿದ ಮಳೆಯ ಪರಿಣಾಮ ಬಹುತೇಕ ಬಡಾವಣೆಗಳು ಅಂಡರ್ ಪಾಸ್ ಗಳು ಜಲಾವೃತಗೊಂಡಿದ್ದವು.

ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ ಬಳಿ ಇರುವ ರಾಜಕಾಲುವೆ ತಡೆಗೋಡೆ ಕುಸಿದಿದೆ. ಕೂಡಲೇ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮಳೆಗೆ ಮಣ್ಣು ಕೊಚ್ಚಿ ಹೋಗದಂತೆ ದುರಸ್ತಿ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಅಲ್ಲಲ್ಲಿ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ರೆಫ್ರಿಜರೇಟರ್, ವಾಶಿಂಗ್ ಮಶೀನ್, ಟಿವಿ ಹಾಗೂ ಇನ್ನಿತರ ವಿದ್ಯುತ್ ಉಪಕರಣ ಸೇರಿ ದಿನಸಿ ಸಾಮಗ್ರಿಗಳು ನೀರು ಪಾಲಾಗಿವೆ.

ಹಲವಾರು ಅಂಡರ್ ಪಾಸ್ ಗಳಲ್ಲಿ ನೀರು ನುಗ್ಗಿದ್ದರಿಂದ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

Edited By : Nirmala Aralikatti
PublicNext

PublicNext

22/10/2020 10:54 am

Cinque Terre

45.86 K

Cinque Terre

0

ಸಂಬಂಧಿತ ಸುದ್ದಿ