ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅಗತ್ಯ ಬಿದ್ದರೆ ಕೋವಿಡ್ ಹಗರಣ ಮರು ತನಿಖೆ - ಪರಮೇಶ್ವರ್

ಮೈಸೂರು: ಶೇಕಡಾ 40 ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ ಎಂದು ಲೋಕಾಯುಕ್ತ ತನಿಖೆ ವಿಚಾರವಾಗಿ ಮೈಸೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು. ನಮಗೆ ಅದೇ ದಾಖಲೆ ಎಂದು ಮಾಧ್ಯಮಗಳಿಗೆ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಈಗ ಲೋಕಾಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂಬುದನ್ನು ನಾವು ನೋಡಬೇಕಿದೆ. ಅಗತ್ಯವಿದ್ದರೆ ಮತ್ತೆ ಅದನ್ನು ಮರುತನಿಖೆಗೆ ಒಳಪಡಿಸಲು ನಾವು ಸಿದ್ಧವಿದ್ದೇವೆ. ಮೊದಲು ನಾವು ಲೋಕಾಯುಕ್ತರ ವರದಿ ಓದುತ್ತೇನೆ. ನಂತರ ಅದರ ಬಗ್ಗೆ ತೀರ್ಮಾನ‌ ಮಾಡುತ್ತೇನೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

19/11/2024 09:45 am

Cinque Terre

35.13 K

Cinque Terre

0

ಸಂಬಂಧಿತ ಸುದ್ದಿ