", "articleSection": "Politics,Infrastructure,Government,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737544091-A3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: 2025 -26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸಲಹೆ ಸೂಚನೆಗಳನ್ನು ತಿಳಿಸಿ ಪರಿಹಾರ ಕಲ್ಪಿಸಿಕೊಡ...Read more" } ", "keywords": ",Mysore,Politics,Infrastructure,Government,Public-News", "url": "https://publicnext.com/node" }
ನಂಜನಗೂಡು: 2025 -26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸಲಹೆ ಸೂಚನೆಗಳನ್ನು ತಿಳಿಸಿ ಪರಿಹಾರ ಕಲ್ಪಿಸಿಕೊಡುವ ಯಾವೊಬ್ಬ ಸಾರ್ವಜನಿಕರು ಕೂಡ ಆಯವ್ಯಯ ಪೂರ್ವಭಾವಿ ಸಭೆಗೆ ಆಗಮಿಸದೆ ಖಾಲಿ ಕುರ್ಚಿಗಳ ದರ್ಶನದಿಂದಾಗಿ ನಗರಸಭಾ ಆಡಳಿತಕ್ಕೆ ಮುಖಭಂಗವಾಗಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಪೌರಾಯುಕ್ತರಾದ ವಿಜಯ್ ನೇತೃತ್ವದಲ್ಲಿ 2025 -26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷ ನಡೆಯುವ ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಪರ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಗೆ ಆಗಮಿಸಿ ಬಜೆಟ್ ನಲ್ಲಿ ಹೊಸದಾಗಿ ಸೇರಿಸಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ, ತಮ್ಮ ಸಲಹೆ ಸೂಚನೆಗಳು ಮತ್ತು ಅಭಿಪ್ರಾಯಗಳನ್ನು ನೀಡುವುದು ವಾಡಿಕೆ.
ಆದರೆ, ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಪರಿಣಾಮ ಸರ್ಕಾರ ಹಣಕಾಸಿನ ದುಸ್ಥಿತಿಯನ್ನು ಎದುರಿಸುತ್ತಿದ್ದು ಯಾವ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ ಎಂಬ ವಿಚಾರ ಅರಿತಿರುವ ಸಾರ್ವಜನಿಕರು ಮತ್ತು ಸಂಘಟಕರುಗಳು ಪೂರ್ವಭಾವಿ ಸಭೆಗೆ ಗೈರಾಗಿರಬಹುದು ಎನ್ನಲಾಗಿದೆ. ಪೂರ್ವಬಾವಿ ಸಭೆಯಲ್ಲಿ ಸಾರ್ವಜನಿಕರ ಕೊರತೆಯಿಂದ ಎದ್ದು ಕಾಣುತ್ತಿದ್ದ ಖಾಲಿ ಕುರ್ಚಿಗಳ ದರ್ಶನದಿಂದಾಗಿ ನಗರಸಭಾ ಸದಸ್ಯರು ಮೌನಕ್ಕೆ ಶರಣಾದರು.
Kshetra Samachara
22/01/2025 04:39 pm