", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1738039093-WhatsApp-Image-2025-01-28-at-7.54.09-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಭೋಪಾಲ್: ಗಂಗಾ ಸ್ನಾನ ಮಾಡಿದರೆ ದೇಶದ ಬಡತನ ಕಡಿಮೆ ಆಗುತ್ತಾ? ಹಸಿದವರಿಗೆ ಊಟ ಸಿಗುತ್ತಾ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ...Read more" } ", "keywords": "Ganga Snan, poverty alleviation, BJP government, Kharge criticism, Indian politics, social welfare, economic development, Karnataka news, BJP Congress debate, Ganga bath benefits ,,Politics", "url": "https://publicnext.com/node" } VIDEO: ಗಂಗಾ ಸ್ನಾನದಿಂದ ಬಡತನ ದೂರವಾಗುತ್ತಾ? ಊಟ ಸಿಗುತ್ತಾ? ಖರ್ಗೆ ಮಾತಿಗೆ ಬಿಜೆಪಿ ಕಿಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಗಂಗಾ ಸ್ನಾನದಿಂದ ಬಡತನ ದೂರವಾಗುತ್ತಾ? ಊಟ ಸಿಗುತ್ತಾ? ಖರ್ಗೆ ಮಾತಿಗೆ ಬಿಜೆಪಿ ಕಿಡಿ

ಭೋಪಾಲ್: ಗಂಗಾ ಸ್ನಾನ ಮಾಡಿದರೆ ದೇಶದ ಬಡತನ ಕಡಿಮೆ ಆಗುತ್ತಾ? ಹಸಿದವರಿಗೆ ಊಟ ಸಿಗುತ್ತಾ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಮಹು ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಾಕುಂಭಮೇಳದ ಗಂಗಾಸ್ನಾನವನ್ನು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಂಗಾ ಸ್ನಾನ ಮಾಡಿದ ದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.

ಗಂಗಾ ಸ್ನಾನದಿಂದ ಬಡತನ ಕಡಿಮೆ ಆಗುತ್ತಾ? ನಾನು ಯಾರದೇ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿಲ್ಲ. ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದ್ರೆ ಗಂಗಾ ಸ್ನಾನದಿಂದ ಹಸಿದ ಮಕ್ಕಳ ಹೊಟ್ಟೆ ತುಂಬಿಸಲಾಗೋದಿಲ್ಲ. ಮಗುವನ್ನು ಶಾಲೆಗೆ ಸೇರಿಸಲಾಗೋದಿಲ್ಲ. ಶ್ರಮಿಕರಿಗೆ ಕೂಲಿ ಸಿಗೋದಿಲ್ಲ. ಪರಿಸ್ಥಿತಿ ಹೀಗಿರಬೇಕಾದ್ರೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸ್ಪರ್ಧೆಗೆ ಬಿದ್ದವರಂತೆ ಗಂಗಾ ನದಿಯಲ್ಲಿ ಮುಳುಗಿ ಏಳುತ್ತಿದ್ದಾರೆ. ಮಾಧ್ಯಮದಲ್ಲಿ ಚೆನ್ನಾಗಿ ಕಾಣುವವರೆಗೂ ನದಿಯಲ್ಲಿ ಮುಳುಗುತ್ತಿರುತ್ತಾರೆ. ಇಂಥ ಜನರಿಂದ ದೇಶ ಉದ್ದಾರ ಆಗುತ್ತಾ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.

ನಮಗೂ ದೇವರಲ್ಲಿ ನಂಬಿಕೆ ಇದೆ. ನಾವು ಕೂಡ ಪೂಜೆ ಮಾಡುತ್ತೇವೆ. ಎಲ್ಲರೂ ತಮ್ಮ ಮನೆಯಲ್ಲಿ ಪೂಜೆ ಮಾಡ್ತಾರೆ. ಅದಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಆದ್ರೆ ಧರ್ಮದ ಹೆಸರಲ್ಲಿ ಶೋಷಣೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧ ಇದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಖರ್ಗೆ ಆಡಿದ ಈ ಮಾತುಗಳಿಗೆ ಬಿಜೆಪಿ ಕಿಡಿ ಕಾರಿದೆ. ಇಫ್ತಾರ್ ಕೂಟ ಮಾಡೋದ್ರಿಂದ ದೇಶದ ಶ್ರೀಮಂತಿಕೆ ಹೆಚ್ಚುತ್ತಾ? ಇದೇ ರೀತಿ ನೀವು ಬೇರೆ ಧರ್ಮಗಳ ಬಗ್ಗೆ ಮಾತಾಡ್ತೀರಾ? ಮಹಾಕುಂಭಮೇಳದ ವಿಚಾರದಲ್ಲಿ ರಾಜಕಾರಣ ಮಾಡ್ಬೇಡಿ ಎಂದು ಬಿಜೆಪಿ ನಾಯಕರು ಖರ್ಗೆ ವಿರುದ್ಧ ಆಕ್ರೋಶಿತರಾಗಿದ್ದಾರೆ.

Edited By : Nagaraj Tulugeri
PublicNext

PublicNext

28/01/2025 10:12 am

Cinque Terre

197.49 K

Cinque Terre

73