", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1738159590-WhatsApp-Image-2025-01-29-at-7.34.24-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪ್ರಯಾಗ್‌ರಾಜ್: ಮಹಾಕುಂಭಮೇಳದ ಕಾಲ್ತುಳಿತದಲ್ಲಿ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 25 ಜನರನ್ನು ಗುರುತಿಸಲಾಗಿದ್ದು, ಉಳಿದ 5 ಜನರ ಗ...Read more" } ", "keywords": "Stampede, Kumbh Mela, Death Toll, Kannadigas, Uttar Pradesh, India, Tragedy, Accident, Hindu Pilgrimage, DIG Vaibhav Krishna.,,Politics,Law-and-Order,Government", "url": "https://publicnext.com/node" } ಕಾಲ್ತುಳಿತದಲ್ಲಿ ನಾಲ್ವರು ಕನ್ನಡಿಗರು ಸೇರಿ 30 ಜನರ ಸಾವು - ದುರಂತದ ಮಾಹಿತಿ ಬಿಚ್ಚಿಟ್ಟ ಡಿಐಜಿ ವೈಭವ್ ಕೃಷ್ಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲ್ತುಳಿತದಲ್ಲಿ ನಾಲ್ವರು ಕನ್ನಡಿಗರು ಸೇರಿ 30 ಜನರ ಸಾವು - ದುರಂತದ ಮಾಹಿತಿ ಬಿಚ್ಚಿಟ್ಟ ಡಿಐಜಿ ವೈಭವ್ ಕೃಷ್ಣ

ಪ್ರಯಾಗ್‌ರಾಜ್: ಮಹಾಕುಂಭಮೇಳದ ಕಾಲ್ತುಳಿತದಲ್ಲಿ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 25 ಜನರನ್ನು ಗುರುತಿಸಲಾಗಿದ್ದು, ಉಳಿದ 5 ಜನರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಹಾಕುಂಭ್ ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಐಜಿ ವೈಭವ್ ಕೃಷ್ಣ ಅವರು, 'ಬ್ರಹ್ಮ ಮುಹೂರ್ತದ ವೇಳೆ (ರಾತ್ರಿ) 1 ರಿಂದ 2ರ ನಡುವೆ, ಅಖಾರ ಮಾರ್ಗದಲ್ಲಿ ಅಪಾರ ಜನರು ಜಮಾಯಿಸಿದರು. ಈ ಜನಸಂದಣಿಯಿಂದಾಗಿ ಇನ್ನೊಂದು ಬದಿಯ ಬ್ಯಾರಿಕೇಡ್‌ಗಳು ಮುರಿದು ಭಕ್ತರ ಮೇಲೆ ಬಿದ್ದಿವೆ. ಪರಿಣಾಮ ಇನ್ನೊಂದು ಬದಿಯಲ್ಲಿ ಪವಿತ್ರ ಸ್ನಾನಕ್ಕಾಗಿ ಕಾಯುತ್ತಿದ್ದ ಸುಮಾರು 90 ಜನರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಆ್ಯಂಬುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ದುರದೃಷ್ಟವಶಾತ್ 4 ಮಂದಿ ಕರ್ನಾಟಕದವರು, ಗುಜರಾತ್ ರಾಜ್ಯದ ಒಬ್ಬರು, ಆಸ್ಸಾಂನ ಒಬ್ಬರು ಸೇರಿ ಒಟ್ಟು 30 ಭಕ್ತರು ಮೃತಪಟ್ಟಿದ್ದಾರೆ. ಈ ಪೈಕಿ 25 ಜನರ ಗುರುತು ಪತ್ತೆಯಾಗಿದೆ. ಇನ್ನುಳಿದವರು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸದ್ಯಕ್ಕೆ ಪರಿಸ್ಥಿತಿ ಸಹಜವಾಗಿದೆ. ಭಕ್ತಾದಿಗಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಯೋಗಿ ಆದಿತ್ಯನಾಥ ಅವರು ಎಲ್ಲಾ ಮಹಾಮಂಡಳೇಶ್ವರರು, ಸಂತರು, ಅಖಾಡಗಳು ಸ್ವಲ್ಪ ತಡವಾಗಿ ಪುಣ್ಯಸ್ನಾನ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

Edited By : Abhishek Kamoji
PublicNext

PublicNext

29/01/2025 07:38 pm

Cinque Terre

68.5 K

Cinque Terre

1

ಸಂಬಂಧಿತ ಸುದ್ದಿ