ಮೈಸೂರು: ಹಿರಿಯರು, ಅನಾಥರು, ವೃದ್ಧರ ಸೇವೆ ಮಾಡುವ ಸಂಸ್ಥೆಗಳಿಗೆ ಉದಾರವಾಗಿ ಜನರು ಕೈ ಜೋಡಿಸಬೇಕು. ಮನೆ ತೊರೆದು ಮೋಕ್ಷದ ಕಡೆಯನ್ನು ಬಯಸಿ ಬರುವಂತಹ ವಯೋವೃದ್ಧರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತಾಗಲಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಸೇವಾಯಾನ ಟ್ರಸ್ಟ್‌ನ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವ್ರು, ಹೆಣ್ಣು ಒಂದು ಮಗುವಾಗಿ, ಮಕ್ಕಳಾಗಿ ಬೆಳೆದು ನಂತರದಲ್ಲಿ ತಂದೆ, ತಾಯಿಯರನ್ನು ನೋಡಿಕೊಳ್ಳುವುದು. ನಂತರ ಕುಟುಂಬದ ಜವಾಬ್ದಾರಿಯನ್ನು ಹೊತ್ತು ನಿರ್ವಹಣೆ ಮಾಡುವುದು ಆಕೆಯ ಕೆಲಸವಾಗಿದೆ ಎಂದರು. ಸಮಾಜದಲ್ಲಿ ಮಹಿಳೆಗೆ ತನ್ನದೇ ಆದ ಸ್ಥಾನವಿದೆ. ನಾವು ಮಹಿಳೆಯರಿಗೆ ಗೌರವ ಮತ್ತು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲೂ ಪ್ರಾಮುಖ್ಯತೆ ಹೊಂದಿದ್ದಾರೆ ಎಂದರು.
ಹಲವು ವರ್ಷಗಳಿಂದೀಚಿಗೆ ಹಿರಿಯರು ಮನೆಯ ಜಂಜಾಟದಲ್ಲಿ ಮಾನಸಿಕ ಯಾತನೆ ಅನುಭವಿಸಲಾಗದೆ ನಾವು ಕೂಡ ನೆಮ್ಮದಿಯಾಗಿ ಬದುಕಬೇಕು ಎನ್ನುವ ಆಲೋಚನೆಯ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರಿಸಿದರು. ಇಂದು ಮಾನಸಿಕ ಮತ್ತು ನೆಮ್ಮದಿಯಿಂದ ಇರುವುದು ಬಹಳಷ್ಟು ಕಷ್ಟ. ಕೆಲವು ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ನೆಮ್ಮದಿಯಿಂದ ಇಲ್ಲದ ಕಾರಣ ಮತ್ತು ಆತಂಕದ ಸ್ಥಿತಿಯಲ್ಲಿರುವ ಅನಾಥಾಶ್ರ, ವೃದ್ಧಾಶ್ರಮಗಳಿಗೆ ಬಂದು ನೆಲೆಸುತ್ತಾರೆ. ಅಂತಹವರ ಸೇವೆ ಮಾಡುವ ಸೇವಾಯಾನ ಸಂಸ್ಥೆಯ ಕೆಲಸ ಶ್ಲಾಘನೀಯವಾಗಿದೆ ಎಂದರು.
ಹಿರಿಯರು, ತಾಯಂದಿರ ಸೇವೆ ಮಾಡುವುದು ಮುಖ್ಯ. ಮನುಷ್ಯನು ಹುಟ್ಟುವಾಗಲೂ ಒಬ್ಬರೇ ಹೋಗುವಾಗಲೂ ಒಬ್ಬರೇ ಎನ್ನುವ ಮಾತಿನಂತೆ ನಾವು ಬದುಕಿರುವ ಕಾಲಘಟ್ಟದಲ್ಲಿ ಸಮಾಜದ ಸೇವೆ ಮಾಡಬೇಕು ಎಂದರು.
ಸಂಸಾರವನ್ನು ನಿಭಾಯಿಸಿದವರು ಇಂದು ಸಾಮಾಜಿಕ ದೈವತ್ವದ ಕಡೆಗೆ ನಾವೆಲ್ಲರೂ ಮುಖ ಮಾಡಿದ್ದೇವೆ. ಶಾಂತಿ, ಪ್ರೀತಿ, ಯೋಗ, ಧ್ಯಾನ, ಹತ್ತಿರದಿಂದ ಕಾಯಕದ ಮೂಲಕ ದೇವರನ್ನು ಕಾಣಬಹುದು. ಧ್ಯಾನದಿಂದಲೂ ನೋಡಬಹುದು ಎಂದರು. ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಸಂಸ್ಥೆಗಳಿಗೆ ದಾನಿಗಳು ಮತ್ತು ಮಾನವೀಯ ಮನಸ್ಸಿನವರು ಹೆಚ್ಚಿನ ನೆರವು ನೀಡಬಹುದು ಎಂದರು.
ಈ ವೇಳೆ ಸೇವಾಯಾನ ಸಂಸ್ಥೆ ಹಿರಿಯರಾದ ಚನ್ನಮ್ಮ ಶ್ರೀಧರ್ಮಸ್ಥಳ ಗ್ರಾಮೀಣಾವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್, ಎನ್‌ಜೆಎಸ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಎಂ.ಎನ್.ಜೈಪ್ರಕಾಶ್, ದುರ್ಗಾ ಹೆಲ್ತ್ ಕೇರ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥರಾದ ಜ್ಯೋತಿಲಕ್ಷ್ಮೀ ಭಟ್, ಸೇವಾಯಾನ ಟ್ರಸ್ಟ್ ಅಧ್ಯಕ್ಷೆ ಬಿ.ಎಸ್.ಪ್ರಭಾಮಣಿ, ಕಾರ್ಯದರ್ಶಿ ಎಂ.ಆಶಾ, ಧರ್ಮದರ್ಶಿ ಕೆ.ಎಂ. ಪ್ರಭಾಶಂಕರ್,ಪತ್ರಕರ್ತ ರಾಜಕುಮಾರ್ ಬಾವಸಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/01/2025 08:45 am