ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಹೆಚ್ಡಿಕೆ ವಿರುದ್ಧ ಅವಹೇಳನಾಕಾರಿ ಪದ ಬಳಕೆ, ಎಡಿಜಿಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ.!

ಮೈಸೂರು : ಎಡಿಜಿಪಿ ಎಂ ಚಂದ್ರಶೇಖರ್ ಅವರ ವಿರುದ್ಧ ಮಾಜಿ ಸಚಿವ ಸಾರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಇಂದು ಮೈಸೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್, ಈ ಐಪಿಎಸ್ ಅಧಿಕಾರಿ 2008ಕ್ಕೆ ರಾಜ್ಯಕ್ಕೆ ಬಂದು ಎಸ್‌ಐಟಿಯಲ್ಲೇ 7 ವರ್ಷ ಇರಲು ಕಾರಣ ಏನು? ಯಾರ ಬೆಂಬಲ ನಿಮಗೆ ಇದೆ ಎಂಬುದೆಲ್ಲ ನಮಗೆ ಗೊತ್ತಿದೆ. ಕೇಂದ್ರ ಸಚಿವರ ಬಗ್ಗೆ ಮಾತನಾಡುವ ನೀವು ಎಷ್ಟು ಪ್ರಾಮಾಣಿಕರು.? ಅಧಿಕಾರಿ ರೀತಿ ಬಿಟ್ಟು ರಾಜಕಾರಣಿ ತರಹ ಮಾತಾಡಿರುವ ನಿಮ್ಮ ವಿರುದ್ಧ ನಾವು ಕ್ರಮ‌ಕ್ಕೆ ಒತ್ತಾಯಿಸುತ್ತೇವೆ‌ ಎಂದು ಸಾರಾ ಮಹೇಶ್ ಆಗ್ರಹಿಸಿದರು.

Edited By : Manjunath H D
PublicNext

PublicNext

04/10/2024 04:42 pm

Cinque Terre

12.33 K

Cinque Terre

0

ಸಂಬಂಧಿತ ಸುದ್ದಿ