ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ರಾಜ್ಯಮಟ್ಟದ ರೈತ ಸಮಾವೇಶ.!

ಮೈಸೂರು : ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಡಿಸೆಂಬರ್ 23ರಂದು ರಾಜ್ಯ ಮಟ್ಟದ ರೈತ ಸಮಾವೇಶ ನಡೆಯಲಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಅಂದು ಸಿಎಂ ಸಿದ್ದರಾಮಯ್ಯನವರು ಸೇರಿ ಕೇಂದ್ರ ಸಚಿವರಾದ ಸೋಮಣ್ಣ ಅವರು ಭಾಗಿಯಾಗಲಿದ್ದಾರೆ ಎಂದರು.

ಅಲ್ಲದೆ ಈ ಸಮಾವೇಶದಲ್ಲಿ ರೈತರ ಸಾಧಕಭಾದಕದ ಜೊತೆ ಸರ್ಕಾರಕ್ಕೆ 20 ಅಂಶಗಳ ಹಕ್ಕೋತ್ತಾಯ ಮಂಡಿಸುತ್ತೇವೆ ಎಂದರು. ಇದೇವೇಳೆ ರಾಷ್ಟ್ರೀಯ ರೈತ ನಾಯಕರ ಉಪಸ್ಥಿತಿ ಸೇರಿ ಹಲವು ರೈತರಿಗೆ ಸನ್ಮಾನ ಮಾಡಲಾಗುವುದು ಎಂದರು.

Edited By : Somashekar
Kshetra Samachara

Kshetra Samachara

20/12/2024 12:54 pm

Cinque Terre

540

Cinque Terre

0

ಸಂಬಂಧಿತ ಸುದ್ದಿ