ಮೈಸೂರು : ಸಿ.ಟಿ ರವಿ ಬಂಧನ ಹಾಗೂ ಅಮಿತ್ ಶಾ ಹೇಳಿಕೆ ತಿರುಚಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಮೈಸೂರಿನ ಮೆಟ್ರೋಪೋಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸೌಧ ದೇಗುಲ ಇದ್ದಂತೆ. ಸಿ.ಟಿ ರವಿ ನಾನು ಆ ಮಾತು ಹೇಳಿಲ್ಲ ಎಂದಿದ್ರು ಕೂಡ ಕಾಂಗ್ರೆಸ್ ರಾಜಕೀಯವಾಗಿ ಅವರನ್ನ ಬಂಧಿಸಿದೆ. ಸ್ಪೀಕರ್‌ಗೆ ದೂರು ಕೊಟ್ಟಿದ್ರೆ ಅವರೇ ಕ್ರಮ ಕೈಗೊಳ್ಳುತ್ತಿದ್ರು. ಅಲ್ಲಿ ಏನು ಮಾತಾಡಿಲ್ಲ ಎಂದರು. ಸುಮ್ಮನೆ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ನಾಗೇಂದ್ರ ಆಕ್ರೋಶ ಹೊರಹಾಕಿದ್ದಾರೆ.
PublicNext
20/12/2024 02:30 pm