ಕಾರವಾರ (ಉತ್ತರ ಕನ್ನಡ): ಶಾಲೆ ಸಮೀಪದಲ್ಲೇ ಚಿರತೆಯೊಂದು ಪ್ರತ್ಯಕ್ಷಗೊಂಡು ಸ್ಥಳೀಯರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೊನ್ನಾವರ ತಾಲೂಕಿನ ಕೆಕ್ಕಾರದ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಜಾಡು ಹುಡುಕುತ್ತಿದ್ದಾರೆ. ಆದರೆ ಸದ್ಯ ಸ್ಥಳೀಯರಿಗೆ ಮಕ್ಕಳನ್ನ ಶಾಲೆಗೆ ಕಳುಹಿಸಿಕೊಡಲು, ರಾತ್ರಿ ಹೊತ್ತು ಹೊರಗೆ ತಿರುಗಾಡಲು, ಜಾನುವಾರುಗಳನ್ನ ಗದ್ದೆ ಬಿಡಲು ಆತಂಕಪಡುವಂತಾಗಿದೆ.
PublicNext
28/09/2022 03:19 pm