ಮೈಸೂರು: ಪಕ್ಷಿಗಳು ಹಾರಿ ಹೋಗದಂತೆ ತಡೆಯಲು ರೆಕ್ಕೆ ಕತ್ತರಿಸಿದ ಆರೋಪದ ಮೇಲೆ ಗ್ರೇಟ್ ಬಾಂಬೆ ಸರ್ಕಸ್ ಕಂಪನಿ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಾಣಿ ದಯಾ ಸಂಸ್ಥೆ ಪೆಟಾ (ಪಿಇಟಿಎ) ನೀಡಿದ ದೂರಿನ ಮೇರೆಗೆ ಮೈಸೂರಿನ ನಜರಾಬಾದ್ ಠಾಣೆ ಪೊಲೀಸರು ಭಾನುವಾರ ಸರ್ಕಸ್ ಕಂಪನಿ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ.
ಐಪಿಎಇ ಸೆಕ್ಷನ್ 429 (ಪಕ್ಷಿಗೆ ಗಂಭೀರ ಗಾಯಗೊಳಿಸುವುದು) ಹಾಗೂ 1960ರ ಪಿಸಿಎ ಕಾಯ್ದೆಯ (ಪ್ರಾಣಿಗಳ ಮೇಲಿನ ಕ್ರೌರ್ಯ ನಿಯಂತ್ರಣ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೆಟಾ ಇಂಡಿಯಾ ನೀಡಿದ ಈ ದೂರಿಗೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಕೂಡ ಬೆಂಬಲ ನೀಡಿ ಎಫ್‌ಐಆರ್ ದಾಖಲಾಗುವಂತೆ ಮಾಡಿರುವುದು ತಿಳಿದುಬಂದಿದೆ.
PublicNext
11/10/2022 03:47 pm