ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಗಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಚಾಮುಂಡಿ ಬೆಟ್ಟದ ಸುತ್ತಲೂ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ.
ಬೆಟ್ಟಕ್ಕೆ ತೆರಳುವ ತಾವರೆಕಟ್ಟೆ ಮುಖ್ಯ ದ್ವಾರದಲ್ಲಿ ಪ್ರತಿಯೊಂದು ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಅಲ್ಲದೆ ರಾಷ್ಟ್ರಪತಿಗಳು ತೆರಳುವ ಮಾರ್ಗಗಳಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಟ್ಟದ ಪಾದದಿಂದ ತುದಿಯವರೆಗೂ ವಿಶೇಷ ಪೊಲೀಸ್ ದಳದಿಂದ ತಪಾಷಣೆ ಕೈಗೊಂಡಿದ್ದು, ಮಾರ್ಗದುದ್ದಕ್ಕೂ 24 ಗಂಟೆಗಳ ಮುಂಚಿತವಾಗಿ ಪೋಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಖಾಕಿ ಪಡೆ ಕಟ್ಟೆಚ್ಚರ ಕೈಗೊಂಡಿದೆ.
PublicNext
26/09/2022 08:32 am