ಮೈಸೂರು : ಶ್ರೀ ಮಲೆ ಮಹದೇಶ್ವರ ಮಹಾ ಕುಂಭಮೇಳ ಮಹೋತ್ಸವ ಹಿನ್ನೆಲೆ ಸುತ್ತೂರು ಶಾಖಾ ಮಠದಲ್ಲಿ ಸಚಿವರು, ಸ್ವಾಮೀಜಿಗಳಿಂದ ಜಂಟಿ ಸುದ್ದಿಗೋಷ್ಠಿ ಕರೆಯಲಾಗಿತ್ತು.
ಮಂಡ್ಯ ಜಿಲ್ಲೆ ಕೆ. ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಕುಂಭ ಮೇಳ ಮಹೋತ್ಸವದಲ್ಲಿ ರಾಜ್ಯದ ವಿವಿಧ ಮಠಧೀಶರು, ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸುತಿದ್ದು,
ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಕುಂಭಮೇಳ ಮಹೋತ್ಸವವನ್ನು ಆಯೋಜಿಸಲಾಗುದು.
ಇನ್ನು ಮೇಳದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಆಗಮಿಸುವಂತೆ ಸುತ್ತೂರು ಶ್ರೀಗಳು ಮನವಿ ಮಾಡಿದ್ದಾರೆ .
ಸುದ್ದಿಗೋಷ್ಟಿಯಲ್ಲಿ ಸಚಿವರುಗಳಾದ ಗೋಪಾಲಯ್ಯ, ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
12/10/2022 12:23 pm