ನಂಜನಗೂಡು: ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಲು ಗ್ರಾ.ಪಂ ಅಧಿಕಾರಿಗಳಿಗೆ
ಮುಂದಾದರೆ ಪೊರಕೆಯಲ್ಲಿ ಹೊಡೆಯುತ್ತೇವೆ ಎಂದು ನಾರಿಯರು ಎಚ್ಚರಿಸಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ಹೆಮ್ಮರಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಹಳ್ಳಿ ಗ್ರಾಮದ ಮಹಿಳೆಯರು, “ಜಲ ಜೀವನ್ ಮಿಷನ್ ಯೋಜನೆಡಿಯ ಮೀಟರ್ ಅಳವಡಿಸುವುದು ನಮಗೆ ಬೇಡವೇ ಬೇಡ ಒಂದು ವೇಳೆ ನಮ್ಮ ಬೀದಿಗೆ ಅಧಿಕಾರಿಗಳು ಬಂದರೆ ಪೊರಕೆಯಲ್ಲಿ ಹೊಡೆಯುತ್ತೇವೆ” ಎಂದು ಪೊರಕೆ ಮತ್ತು ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮಗೆ ವಿದ್ಯುತ್ ಬಿಲ್ಲನ್ನು ಕಟ್ಟಲು ನಮ್ಮಲ್ಲಿ ಆಗುತ್ತಿಲ್ಲ, ಬಿಲ್ ಕಟ್ಟಿಲ್ಲ ಅಂದ್ರೆ ವಿದ್ಯುತ್ ಸಂಪರ್ಕ ಕಟ್ ಮಾಡುತ್ತಿದ್ದಾರೆ ಸಿಲಿಂಡರ್ ಬೆಲೆ ಏರಿಕೆಯಾಗಿದೆ, ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆಯಾಗಿದೆ. ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಿ ಅದಕ್ಕೆ ತೆರಿಗೆ ವಸೂಲಿ ಮಾಡ್ತೀರಿ. ಕುಡಿಯೋ ನೀರಿಗೂ ನಾವು ದುಡ್ಡು ಕೊಡಬೇಕಾ” ಎಂದು ಪ್ರಶ್ನಿಸಿದ್ದಾರೆ.
PublicNext
23/09/2022 06:50 pm