ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ವೆಂಕಟರಮಣ ಕಾಲೊನಿಯಲ್ಲಿ ಕುಡಿಯುವ ನೀರು ಚರಂಡಿ ಪಾಲು- ಆಕ್ರೋಶ

ಮುಲ್ಕಿ: ಸುರತ್ಕಲ್‌ನ ತಡಂಬೈಲ್ ವೆಂಕಟ್ರಮಣ ಕಾಲೊನಿಯಲ್ಲಿ ಕೆಲ ತಿಂಗಳಿನಿಂದ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಪೈಪ್ ಒಡೆದು ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಸುಮಾರು 6 ಕಡೆ ಅಳವಡಿಸಿದ ಪೈಪು ಒಡೆದು ಹೋಗಿ ಕುಡಿಯಲು ಯೋಗ್ಯವಾದ ನೀರು ಯಾರಿಗೂ ಸಿಗದಂತೆ ಆಗಿದೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಶ್ವೇತಾ ಗಮನಕ್ಕೆ ತಂದರೂ ದುರಸ್ತಿ ಇದುವರೆಗೂ ಆಗಿಲ್ಲ. ಇನ್ನು ಒಂದೆರಡು ತಿಂಗಳು ಕಳೆದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ.

ಈ ರೀತಿ ಕುಡಿಯುವ ನೀರು ಪೋಲಾದರೆ ಮುಂದಿನ ದಿನಗಳಲ್ಲಿ ನಾಗರಿಕರಿಗ ಸಮಸ್ಯೆಯಾಗುವ ಸಾಧ್ಯತೆ ಇದೆ. ಕೂಡಲೇ ಪಾಲಿಕೆ ಸದಸ್ಯರು, ಅಧಿಕಾರಿಗಳು ಉದಾಸೀನ ಪ್ರವೃತ್ತಿ ತೊರೆದು ಪಾಲಿಕೆಗೆ, ನಾಗರಿಕರಿಗೆ ನಷ್ಟವಾಗದಂತೆ ದುರಸ್ತಿ ಕೈಗೊಳ್ಳಬೇಕು ಎಂದು ಸ್ಥಳೀಯರು ಚಾಟಿ ಬೀಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/11/2020 01:35 pm

Cinque Terre

5.37 K

Cinque Terre

0

ಸಂಬಂಧಿತ ಸುದ್ದಿ