ಸುರತ್ಕಲ್: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಜರಗಿದ ಯುನೈಟೆಡ್ ಫೋಟೋಕಾನ್ ಕರಾಟೆ ಡೋ ಇಂಡಿಯಾ ಮತ್ತು ಮಹಿರಾ ಶಾಟೋಕಾನ್ ಕರಾಟೆ ಡೋ ಇಂಡಿಯಾ ಜಂಟಿಯಾಗಿ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸೂರಿಂಜೆ ವೇದಾಂತ ಬಿ. ಶೆಟ್ಟಿ ರವರು ಬೆಳ್ಳಿಯ ಮತ್ತು ಕಂಚಿನ ಪದಕ ಗೆದ್ದಿರುತ್ತಾರೆ.
ವೇದಾಂತ ಬಿ ಶೆಟ್ಟಿ ಸುರತ್ಕಲ್ ವಿದ್ಯಾಯಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ. ಸೂರಿಂಜೆ ಭೋಜರಾಜ ಶೆಟ್ಟಿ ಮತ್ತು ಶಾಂಭವಿ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಕರಾಟೆ ಶಿಕ್ಷಕರಾದ ಹಳೆಯಂಗಡಿ ದಿನೇಶ್ ಆಚಾರ್ಯ ರವರಿಂದ ತರಬೇತಿ ಪಡೆದಿರುತ್ತಾರೆ.
Kshetra Samachara
29/01/2022 07:48 pm