ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕ್ರಿಕೆಟ್ ಪಂದ್ಯಾಟ; ಎಸ್ ಎಸ್ ಫ್ರೆಂಡ್ಸ್ ತಂಡಕ್ಕೆ ಪ್ರಶಸ್ತಿ; ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ

ಮುಲ್ಕಿ: ಮುಲ್ಕಿ ಫ್ರೆಂಡ್ಸ್ ವತಿಯಿಂದ ಮುಲ್ಕಿ ಪ್ರೇಮಿಯರ್ ಲೀಗ್ 2022 ಕ್ರಿಕೆಟ್ ಪಂದ್ಯಾಟ ಸರಕಾರಿ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಿತು.

ಅಂತಿಮ ಪಂದ್ಯಾಟದ ರೋಮಾಂಚಕ ಪಂದ್ಯದಲ್ಲಿ ಎಸ್ ಎಸ್ ಫ್ರೆಂಡ್ಸ್ ತಂಡವು ಆಕೃತಿ ಕ್ರಿಕೆಟರ್ಸ್ ಕೋಲ್ನಾಡ್ ತಂಡವನ್ನು ಸೋಲಿಸಿ ಮುಲ್ಕಿ ಪ್ರೇಮಿಯರ್ ಲೀಗ್ -2022 ಟ್ರೋಪಿ ಹಾಗೂ ನಗದು ಪುರಸ್ಕಾರ ಪಡೆದರೆ ಆಕೃತಿ ಕ್ರಿಕೆಟರ್ಸ್ ಕೋಲ್ನಾಡು ದ್ವಿತೀಯ ಸ್ಥಾನ ಹಾಗೂ ಸೆವೆನ್ ಸ್ಟಾರ್ ಕಾರ್ನಾಡು ತೃತೀಯ ಸ್ಥಾನದ ಪ್ರಶಸ್ತಿ ಪಡೆಯಿತು.

ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ರಾಗಿ ಎಸ್.ಎಸ್. ಫ್ರೆಂಡ್ಸ್ ತಂಡದ ಪ್ರದೀಪ್ ಶೆಟ್ಟಿ ಸರಣಿಶ್ರೇಷ್ಠ ರಾಗಿ ಗೌರೀಶ್, ಉತ್ತಮ ದಾಂಡಿಗ ಪ್ರಸಿದ್ದ ಆಚಾರ್ಯ, ಉತ್ತಮ ಎಸೆತಗಾರರಾಗಿ ಆಕೃತಿ ಕೊಲ್ನಾಡು ತಂಡದ ಪ್ರೀತೇಶ್ ಪ್ರಶಸ್ತಿಯನ್ನು ಪಡೆದುಕೊಂಡರು.

ಬಹುಮಾನ ವಿತರಣೆಯ ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ರಾಜೇಶ್ ಬೈಕಂಪಾಡಿ, ನಿವೃತ್ತ ಆರ್ ಟಿ ಓ ಇನ್ಸ್ ಪೆಕ್ಟರ್ ಬಿಎಸ್ ಚೆನ್ನಪ್ಪ, ಮುಲ್ಕಿ ನಪಂ ಸದಸ್ಯ ಮುನ್ನಾ ಯಾನೆ ಮಹೇಶ, ಸಾಮಾಜಿಕ ಕಾರ್ಯಕರ್ತ ವಿಶುಕುಮಾರ್, ಮುಲ್ಕಿ ಫ್ರೆಂಡ್ಸ್ ತಂಡದ ಅಧ್ಯಕ್ಷ ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ದಿನೇಶ್ ಕೋಲ್ನಾಡು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಶಕ್ತ 5 ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

26/01/2022 08:01 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ